ಐವರ ಥಳಿಸಿ ಹತ್ಯೆ ಪ್ರಕರಣ: 23 ಮಂದಿಯ ಬಂಧನ

ಹೊಸದಿಲ್ಲಿ, ಜು. 2: ಮಹಾರಾಷ್ಟ್ರದ ಧುಲೆ ಜಿಲ್ಲೆಯಲ್ಲಿ ಮಕ್ಕಳ ಅಪಹರಣಕಾರರೆಂದು ಶಂಕಿಸಿ ಐವರನ್ನು ಥಳಿಸಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ 23 ಮಂದಿಯನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಮುಂಬೈಯಿಂದ 325 ಕಿ.ಮೀ. ದೂರದಲ್ಲಿರುವ ಸಕ್ರಿ ತಾಲುಕಿನ ರೈನ್ ಪಾಡ ಬುಡಕಟ್ಟು ಕುಗ್ರಾಮದಲ್ಲಿ ರವಿವಾರ ಬೆಳಗ್ಗೆ ಮಕ್ಕಳ ಕಳ್ಳರೆಂದು ಶಂಕಿಸಿ ಐದು ಮಂದಿಯನ್ನು ಥಳಿಸಿ ಹತ್ಯೆಗೈಯಲಾಗಿತ್ತು. ಈ ಘಟನೆ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
Next Story





