ವೈದ್ಯರ ದಿನಾಚರಣೆ: ಔಷಧಿ ಸಸ್ಯ ವಿತರಣೆ

ಉಡುಪಿ, ಜು.2: ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ವತಿಯಿಂದ ‘ರಾಷ್ಟ್ರೀಯ ವೈದ್ಯರ ದಿನ’ವನ್ನು ವಿನೂತನ ರೀತಿಯಲ್ಲಿ ಅಜ್ಜರಕಾಡು ಜಿಲ್ಲಾಸ್ಪತ್ರೆ ಮತ್ತು ಕವಿ ಮುದ್ದಣ ಮಾರ್ಗದಲ್ಲಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಆಚರಿಸ ಲಾಯಿತು.
ಆಸ್ಪತ್ರೆಯ ಎಲ್ಲಾ ವೈದ್ಯರುಗಳಿಗೆ, ಭೂಮಡಿಲು ಹಸಿರಾಗಿಸುವ ನೆಲೆಯಲ್ಲಿ, ಔಷಧಿ ಸಸ್ಯಗಳನ್ನು ನೀಡಿ, ಸಿಹಿತಿಂಡಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್, ಮಹಿಳಾ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಕಿಶೋರಿ, ಹಿರಿಯ ವೈದ್ಯ ಡಾ.ಕೃಷ್ಣರಾಜ್ ಭಟ್, ನಾಗರಿಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ಸದಸ್ಯರಾದ ತಾರಾನಾಥ್ ಮೇಸ್ತ ಶಿರೂರು, ವಿನಯಚಂದ್ರ ಸಾಸ್ತಾನ ಮೊದಲಾದವರು ಉಪಸ್ಥಿತರಿದ್ದರು.
Next Story





