ಎಸಿಎಸ್‌ಎಡಿ ಕಾರ್ಯಕಾರಿ ಸದಸ್ಯನಾಗಿ ಸೌದಿ ಅರೇಬಿಯ ಆಯ್ಕೆ
ಜಿದ್ದಾ, ಜು. 2: ಅರಬ್ ಒಣ ಪ್ರದೇಶಗಳ ಅಧ್ಯಯನ ಕೇಂದ್ರ (ಎಸಿಎಸ್‌ಎಡಿ)ದ ಕಾರ್ಯಕಾರಿ ಸಮಿತಿಯ ಸದಸ್ಯನಾಗಿ ಮುಂದಿನ ಎರಡು ವರ್ಷಗಳ ಅವಧಿಗೆ ಸೌದಿ ಅರೇಬಿಯವನ್ನು ಆಯ್ಕೆ ಮಾಡಲಾಗಿದೆ.
ಈಜಿಪ್ಟ್ ರಾಜಧಾನಿ ಕೈರೋದಲ್ಲಿ ನಡೆದ ಜನರಲ್ ಅಸೆಂಬ್ಲಿಯ 34ನೇ ಅಧಿವೇಶನದಲ್ಲಿ ಈ ಆಯ್ಕೆ ನಡೆದಿದೆ.
ಈಜಿಪ್ಟ್ ಕೃಷಿ ಸಚಿವ ಡಾ. ಈಸುದ್ದೀನ್ ಅಬು ಸೆಟಿಟ್ ಅಧ್ಯಕ್ಷತೆಯಲ್ಲಿ ಅಧಿವೇಶನ ನಡೆಯಿತು. ಅರಬ್ ದೇಶಗಳ ಕೃಷಿ ಸಚಿವರು, ಅರಬ್ ಲೀಗ್ ಪ್ರತಿನಿಧಿಗಳು, ಸೌದಿ ಪರಿಸರ ಕಾರ್ಯದರ್ಶಿ ಸಚಿವ ಡಾ. ಉಸಾಮ ಬಿನ್ ಇಬ್ರಾಹೀಂ ಫಕೀಹ ಮುಂತಾದವರು ಉಪಸ್ಥಿತರಿದ್ದರು.
Next Story





