ಪ್ರಾಮಾಣಿಕತೆ ಮೆರೆದ ಸುನ್ನತ್ ಕೆರೆಯ ರಿಕ್ಷಾ ಚಾಲಕ ಹಮೀದ್

ಬೆಳ್ತಂಗಡಿ, ಜು. 2: ಇಲ್ಲಿನ ಪರಪ್ಪು ಎಂಬಲ್ಲಿಗೆ ಬಾಡಿಗೆಗೆ ಹೋಗುತಿದ್ದ ಸಂದರ್ಭ ರಸ್ತೆ ಬದಿಯಲ್ಲಿ ಸಿಕ್ಕಿದ ಚಿನ್ನಾಭರಣ, ನಗದು ಹಾಗು ಮೊಬೈಲ್ ಅನ್ನು ವಾರಸುದಾರರಿಗೆ ಒಪ್ಪಿಸುವ ಮೂಲಕ ರಿಕ್ಷಾ ಚಾಲಕರೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ.
ಬೆಳ್ತಂಗಡಿಯ ಗುರುವಾಯನಕೆರೆ, ಸುನ್ನತ್ ಕೆರೆ ನಿವಾಸಿ, ರಿಕ್ಷಾ ಚಾಲಕ ಹಮೀದ್ ಯಾನೆ ಪೊಡಿಮೋನು (55) ಪ್ರಾಮಾಣಿಕತೆ ಮೇರೆದ ರಿಕ್ಷಾ ಚಾಲಕ ಎಂದು ಗುರುತಿಸಲಾಗಿದೆ.
ಅವರು ರಿಕ್ಷಾದಲ್ಲಿ ಪರಪ್ಪು ಎಂಬಲ್ಲಿಗೆ ಬಾಡಿಗೆಗೆ ಹೋಗುತ್ತಿದ್ದ ಸಂದರ್ಭ ರಸ್ತೆ ಬದಿಯಲ್ಲಿ ಸುಮಾರು 2 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು ಹಾಗೂ ಒಂದು ಮೊಬೈಲ್ ಫೋನ್ ಸಿಕ್ಕಿದ್ದು, ನಂತರ ಸಂಬಂಧಪಟ್ಟವರಿಗೆ ಕರೆ ಮಾಡಿ, ಅದರ ವಾರಸುದಾರರಾದ ಪುತ್ತೂರಿನ (ಬಲ್ನಾಡು, ಗ್ರಾಮದ) ಪ್ರೇಮ ಎಂಬರಿಗೆ ಒಪ್ಪಿಸಿ ಮಾನವೀಯತೆ ಮೆರೆದಿದ್ದು, ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
Next Story





