ಕೊಲ್ಲಿಯ ಗರಿಷ್ಠ ರಾತ್ರಿ ಉಷ್ಣಾಂಶ ಒಮನ್‌ನಲ್ಲಿ ದಾಖಲು

ಮಸ್ಕತ್, ಜು. 2: ಒಮನ್ ದೇಶದ ಕುರಿಯತ್‌ನಲ್ಲಿ ಜೂನ್ 27ರಂದು 42.6 ಡಿಗ್ರಿ ಸೆಲ್ಸಿಯಸ್ ರಾತ್ರಿಯ ಉಷ್ಣತೆ ದಾಖಲಾಗಿದ್ದು, ಇದು ಈವರೆಗಿನ ಅತಿ ಹೆಚ್ಚಿನ ರಾತ್ರಿಯ ಉಷ್ಣಾಂಶವಾಗಿದೆ.
ಇತರ ಸ್ಥಳಗಳಲ್ಲಿ ಉಷ್ಣಾಂಶ ಇದಕ್ಕಿಂತಲೂ ಹೆಚ್ಚಾಗಿರುವ ಸಾಧ್ಯತೆಯಿದೆ, ಆದರೆ ಅದು ದಾಖಲಾಗಿಲ್ಲ ಎಂದು ನಾಗರಿಕ ವಾಯುಯಾನ ಪ್ರಾಧಿಕಾರದ ಹವಾಮಾನ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.
‘‘ವಾಯುವ್ಯ ದಿಕ್ಕಿನಿಂದ ಬೀಸುವ ಒಣ ಗಾಳಿಯು ಮರುಭೂಮಿಯನ್ನು ಹಾದುಕೊಂಡು ಬರುವ ಹಿನ್ನೆಲೆಯಲ್ಲಿ ರಾತ್ರಿಯ ಉಷ್ಣಾಂಶದಲ್ಲಿ ಹೆಚ್ಚಳವಾಗಿದೆ’’ ಎಂದು ಅವರು ಹೇಳಿದರು.
Next Story





