ಭಟ್ಕಳ: ಹೃದಯಾಘಾತದಿಂದ ಒಂದೇ ದಿನ ಮೃತಪಟ್ಟ ತಾಯಿ-ಮಗ

ಮೃತರ ಮನೆ ಮುಂದೆ ಸೇರಿದ ಸ್ಥಳೀಯರು
ಭಟ್ಕಳ, ಜು. 3: ತನ್ನ ತಾಯಿ ನಿಧನರಾದ ಸುದ್ದಿ ತಿಳಿದ ಪುತ್ರ ಹೃದಯಾಘಾತಕ್ಕೊಳಗಾಗಿ ಮೃತಪಟ್ಟ ಘಟನೆ ಭಟ್ಕಳದ ಮದೀನಾ ಕಾಲನಿಯ ಮುಹಿಯುದ್ದೀನ್ ಸ್ಟ್ರೀಟ್ ನಲ್ಲಿ ಮಂಗಳವಾರ ನಡೆದಿದೆ.
ಶಹರ್ ಬಾನು ಮಲ್ಪಾ (80) ಹಾಗೂ ಅವರ ಪುತ್ರ ಫಕ್ಕಿ ಇಸ್ಮಾಯಿಲ್ ಮಲ್ಪಾ (56) ಮೃತರು ಎಂದು ಗುರುತಿಸಲಾಗಿದೆ.
ಮೂಲಗಳ ಪ್ರಕಾರ ಶಹರ್ ಬಾನು ಮಲ್ಪಾ ಇಂದು ಮಧ್ಯಾಹ್ನ 2 ಗಂಟೆಗೆ ತನ್ನ ಮನೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದು, ಮುಹಿಯುದ್ದೀನ್ ಸ್ಟ್ರೀಟ್ ನ 1ನೇ ಕ್ರಾಸ್ ನಲ್ಲಿ ಅವರ ಪುತ್ರ ಫಕ್ಕಿ ಇಸ್ಮಾಯಿಲ್ ತನ್ನ ತಾಯಿಯ ಮೃತದೇಹವನ್ನು ಕಾಣಲು ಬಂದಿದ್ದು, ನಂತರ ಹೃದಯಾಘಾತಕ್ಕೊಳಗಾಗಿದ್ದು ಅವರನ್ನು ಮಂಗಳೂರು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟರು ಎಂದು ತಿಳಿದು ಬಂದಿದೆ.
ತಾಯಿ ಮತ್ತು ಮಗ ಒಂದೇ ದಿನ ಮೃತಪಟ್ಟಿರುವ ಸುದ್ದಿಯಿಂದಾಗಿ ಅವರ ಕುಟುಂಬದಲ್ಲಿ ಸೂತಕದ ಛಾಯೆ ಆವರಿಸಿದೆ. ಇವರಿಬ್ಬರ ಅಂತ್ಯ ಸಂಸ್ಕಾರವನ್ನು ಮಂಗಳವಾರ ಮಗ್ರಿಬ್ ನಮಾಝ್ ಬಳಿಕ ಜಾಮಿಯಾ ಮಸೀದಿಯ ವಠಾರದಲ್ಲಿ ನೆರವೇರಿಸಲಾಯಿತು ಎಂದು ಮೂಲಗಳು ತಿಳಿಸಿವೆ.
Next Story





