ಹೂಡೆ ಸಾಲಿಹಾತ್‌ನಲ್ಲಿ ಬ್ಯಾಗ್ ರಹಿತ ದಿನಾಚರಣೆ

ಉಡುಪಿ, ಜು.3: ತೋನ್ಸೆ ಹೂಡೆಯ ಸಾಲಿಹಾತ್ ಶಾಲೆಯಲ್ಲಿ ಬ್ಯಾಗ್ ರಹಿತ ದಿನವನ್ನು ಶನಿವಾರ ಆಚರಿಸಲಾಯಿತು.
ಪ್ರೌಢ ಶಾಲೆಯ ವಿದ್ಯಾರ್ಥಿಗಳು ಕೆಮ್ಮಣ್ಣು ಗ್ರಾಪಂಗೆ ಭೇಟಿ ನೀಡಿ ವ್ಯವಸ್ಥೆಯ ಕುರಿತು ಮಾಹಿತಿ ಪಡೆದುಕೊಂಡರು. ಗ್ರಾಪಂ ಅಧ್ಯಕ್ಷೆ ಫೌಜಿಯಾ ಸಾಧಿಕ್, ಸದಸ್ಯರು ಹಾಗೂ ಸಿಬ್ಬಂದಿಗಳು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಪ್ರಾಥಮಿಕ ಶಾಲೆಯ ವಿಭಾಗದಲ್ಲಿ ಚಿತ್ರಕಲೆ, ಕ್ವಿಝ್, ವಿಜ್ಞಾನ ಮಾದರಿ ಇತ್ಯಾದಿ ವಿಷಯಗಳಲ್ಲಿ ಚಟುವಟಿಕೆ ನಡೆಸಲಾಯಿತು. ಸಂಸ್ಥೆಯ ಆಡಳಿತಾಧಿ ಕಾರಿ ಅಸ್ಲಾಂ ಹೈಕಾಡಿ, ಮುಖ್ಯ ಶಿಕ್ಷಕಿಯರಾದ ಸುನಂದಾ, ಲವೀನಾ ಕ್ಲಾರಾ, ಸಮೀನಾ ನಝೀರ್ ಹಾಗೂ ಸಹ - ಶಿಕ್ಷಕಿಯರ ಮಾರ್ಗದರ್ಶನದಲ್ಲಿ ಬ್ಯಾಗ್ ರಹಿತ ದಿನಾಚರಣೆ ಯಶಸ್ವಿಯಾಗಿ ನಡೆಯಿತು.
Next Story





