ಪಡುಬಿದ್ರೆ: 3026 ವಿದ್ಯಾರ್ಥಿಗಳಿಗೆ ಶಿಕ್ಷಣ ಪರಿಕರಗಳ ವಿತರಣೆ

ಪಡುಬಿದ್ರೆ, ಜು.3: ಅದಾನಿ ಉಡುಪಿ ಪವರ್ ಕಂಪನಿಯು ಸಿಎಸ್‌ಆರ್ ಯೋಜನೆಯ ಶೈಕ್ಷಣಿಕ ಚಟುವಟಿಕೆ ಕಾರ್ಯಕ್ರಮದಡಿಯಲ್ಲಿ ಸ್ಥಾವರದ ಸುತ್ತ ಮುತ್ತಲಿನ ಗ್ರಾಪಂ ವ್ಯಾಪ್ತಿಯ ಸರಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಎರಡನೆ ಹಂತದ ಶಾಲಾ ಪರಿಕರಗಳನ್ನು ಇಂದು ವಿತರಿಸಲಾಯಿತು.
ಒಟ್ಟು 32 ಶಾಲೆಯಲ್ಲಿ ಕಲಿಯುತ್ತಿರುವ 3026 ವಿದ್ಯಾರ್ಥಿಗಳಿಗೆ ಒಟ್ಟು 28.38 ಲಕ್ಷ ರೂ. ಮೌಲ್ಯದ ಶಿಕ್ಷಣ ಪರಿಕರಗಳಾದ ನೋಟ್ ಪುಸ್ತಕಗಳು, ಬ್ಯಾಗ್, ಜಿಯೊಮಿಟ್ರಿ ಬಾಕ್ಸ್ ಮತ್ತು ಕೊಡೆಗಳನ್ನು ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ವಿತರಿಸಿದರು. ಹೀಗೆ ಎರಡು ಹಂತದಲ್ಲಿ ಒಟ್ಟು 58.79 ಲಕ್ಷ ರೂ. ಮೌಲ್ಯದ ಪರಿಕರಗಳನ್ನು 6,268 ವಿದ್ಯಾರ್ಥಿಗಳಿಗೆ ವಿತರಿಸಿದೆ.
ವಿತರಣಾ ಸಮಾರಂಭದಲ್ಲಿ ಯುಪಿಸಿಎಲ್ ಸಂಸ್ಥೆಯ ಅಸೋಸಿಯೇಟ್ ಜನರಲ್ ಮ್ಯಾನೆಜರ್ ಗಿರೀಶ್ ನಾವಡ, ಹಿರಿಯ ವ್ಯವಸ್ಥಾಪಕ ರವಿ ಆರ್. ಜೇರೆ, ಅದಾನಿ ಫೌಂಡೇಷನ್ ಸಂಸ್ಥೆಯ ವಿನೀತ್ ಅಂಚನ್, ಸುಕೇಶ್ ಸುವರ್ಣ, ಅನುದೀಪ್ ಪೂಜಾರಿ ಉಪಸ್ಥಿತರಿದ್ದರು.
Next Story





