Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಒಂದೇ ಕುಟುಂಬದ 11 ಮಂದಿಯ ಸಾಮೂಹಿಕ...

ಒಂದೇ ಕುಟುಂಬದ 11 ಮಂದಿಯ ಸಾಮೂಹಿಕ ಆತ್ಮಹತ್ಯೆ ಪ್ರಕರಣ: ಮತ್ತಷ್ಟು ವಿಚಿತ್ರ, ಕುತೂಹಲಕಾರಿ ಮಾಹಿತಿಗಳು ಬಹಿರಂಗ

ವಾರ್ತಾಭಾರತಿವಾರ್ತಾಭಾರತಿ3 July 2018 10:00 PM IST
share
ಒಂದೇ ಕುಟುಂಬದ 11 ಮಂದಿಯ ಸಾಮೂಹಿಕ ಆತ್ಮಹತ್ಯೆ ಪ್ರಕರಣ: ಮತ್ತಷ್ಟು ವಿಚಿತ್ರ, ಕುತೂಹಲಕಾರಿ ಮಾಹಿತಿಗಳು ಬಹಿರಂಗ

ಹೊಸದಿಲ್ಲಿ, ಜು.3: ರಾಜಧಾನಿಯ ಬುರಾರಿ ಪ್ರದೇಶದಲ್ಲಿ ಒಂದೇ ಕುಟುಂಬದ ಹನ್ನೊಂದು ಮಂದಿಯ ಸಾಮೂಹಿಕ ಆತ್ಮಹತ್ಯೆ ಪ್ರಕರಣದಲ್ಲಿ ಪ್ರತಿ ದಿನವೆಂಬಂತೆ ಸ್ವಾರಸ್ಯಕರ ಹಾಗು ವಿಚಿತ್ರ ಮಾಹಿತಿಗಳು ಹೊರ ಬೀಳುತ್ತಿವೆ.

ಮೃತರಲ್ಲಿ ಒಬ್ಬರಾಗಿರುವ ಉದ್ಯಮಿ, 45 ವರ್ಷದ ಲಲಿತ್ ಭಾಟಿಯಾ ಅವರು ತಾವು ಮತ್ತು ತಮ್ಮ ಕುಟುಂಬದ ಇತರ ಹತ್ತು ಮಂದಿಯ ಸಾವಿಗೆ ಮುನ್ನುಡಿ ಬರೆದ ಧಾರ್ಮಿಕ ಪ್ರಕ್ರಿಯೆಯೊಂದರ ನೇತೃತ್ವ ವಹಿಸಿದ್ದರೆಂದು ಪೊಲೀಸರು ಈಗ ಹೇಳುತ್ತಿದ್ದಾರೆ. ಲಲಿತ್ ಸೇರಿದಂತೆ ಕುಟುಂಬದ ಹತ್ತು ಮಂದಿ ಕಬ್ಬಿಣದ ಗ್ರಿಲ್ ಒಂದರಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಹಾಗೂ ಕೈಗಳನ್ನು ಹಿಂದಕ್ಕೆ ಕಟ್ಟಲಾದ ಸ್ಥಿತಿಯಲ್ಲಿ ಕಂಡು ಬಂದಿದ್ದರೆ, 77 ವರ್ಷದ ನಾರಾಯಣಿ ದೇವಿಯ ಮೃತದೇಹ ಇನ್ನೊಂದು ಕೋಣೆಯ ನೆಲದಲ್ಲಿತ್ತು.

ಲಲಿತ್ ಭಾಟಿಯಾರ ಡೈರಿಯಲ್ಲಿ ವರ್ಷಗಳ ಹಿಂದೆ ಸಾವಿಗೀಡಾದ ತಂದೆಯನ್ನು ಕನಸಿನಲ್ಲಿ ಕಾಣುತ್ತಿರುವ ಬಗ್ಗೆ ಹಾಗೂ  ಕುಟುಂಬ, ಉದ್ದಿಮೆ ಹಾಗೂ ಆಸ್ತಿ ಸಂಬಂಧಿಸಿದಂತೆ ಅವರಿಂದ  ಸೂಚನೆಗಳನ್ನು ಪಡೆಯುತ್ತಿರುವ ಬಗ್ಗೆ ಬರೆದಿದ್ದಾರಲ್ಲದೆ, ತಾನು ಆಚರಿಸುವ ಎಲ್ಲಾ ಪದ್ಧತಿಗಳಿಗೂ 'ಊಪರ್ ಸೇ ಆದೇಶ್' ಎಂದು ಬರೆದಿದ್ದಾರೆ. ಪುಸ್ತಕದಲ್ಲಿರುವ ಅಕ್ಷರಗಳು ಲಲಿತ್ ಅವರ ಕೈಬರಹವನ್ನೇ ಹೋಲುತ್ತವೆಯೆನ್ನಲಾಗಿದ್ದು, ಜನವರಿಯಿಂದೀಚೆಗೆ ಅದರಲ್ಲಿ ಹೆಚ್ಚಿನ ಮಾಹಿತಿ ಬರೆಯಲಾಗಿತ್ತು, ಕೊನೆಯ ಬಾರಿಗೆ ಜೂನ್ 25ರಂದು ಬರೆಯಲಾಗಿತ್ತು. ಕುಟುಂಬ ಹೇಗೆ ಸಾಯಬೇಕೆನ್ನುವ ವಿಚಾರದಲ್ಲಿ ಹಲವಾರು ಬಾರಿ ರಿಹರ್ಸಲ್ ನಡೆಸಿತ್ತು. ಆ ಪುಸ್ತಕದಲ್ಲಿ ಆಲದ ಮರವನ್ನು ಆರಾಧಿಸುವ (ವಾಟ್ ತಪಸ್ಯ) ಬಗ್ಗೆ  ಬರೆಯಲಾಗಿತ್ತು ಹಾಗೂ ಅದರ ನೇತಾಡುತ್ತಿರುವ ಬೇರನ್ನು ಆರಾಧಿಸುವ ಬಗ್ಗೆಯೂ ಹೇಳಲಾಗಿತ್ತು.

ಆಲದ ಮರದ ಬೇರುಗಳಂತೆಯೇ ವಾಟ್ ತಪಸ್ಯ ಮಾಡುವವರು ನೇತಾಡಬೇಕೆಂದೂ ಬರೆಯಲಾಗಿದೆ. 'ಚಿಂತನ್ ಕರೋ, ಚಿಂತಾ ಮತ್ ಕರೋ, ಲಲಿತ್ ಆರೋಗ್ಯದ ಬಗ್ಗೆ ಚಿಂತೆ ಬೇಡ ಆದು ನನ್ನ ಭೇಟಿಯಿಂದಾಗಿ' ಎಂದೂ ಬರೆಯಲಾಗಿತ್ತು.

ಕುಟುಂಬ ಸದಸ್ಯರು ಡೆಲ್ಯೂಶನಲ್ ಡಿಸಾರ್ಡರ್ ನಿಂದ ನರಳುತ್ತಿದ್ದಿರಬಹುದು, ಅವರ ಮಾನಸಿಕ ಆರೋಗ್ಯ ಹೇಗಿತ್ತು ಎಂಬ ಬಗ್ಗೆ ತಜ್ಞರಿಂದ  ಮಾಹಿತಿ ಸಂಗ್ರಹಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಆ ಮನೆಯಲ್ಲಿ ಪೂರ್ಣಕಾಲಿಕ ಕೆಲಸ ಮಾಡುತ್ತಿದ್ದ ಮೇಸ್ತ್ರಿ ಹಾಗೂ ಒಬ್ಬ ಮನೆಕೆಲಸದಾಳುವಿನ ಪ್ರಕಾರ ಲಲಿತ್ ಕಳೆದ ಮೂರು ತಿಂಗಳುಗಳಿಂದ ಕುತ್ತಿಗೆ ಹಾಗು ಬೆನ್ನು ನೋವಿನಿಂದ ಬಳಲುತ್ತಿದ್ದರು. ಕುಟುಂಬ ಒಂದು ನಿರ್ದಿಷ್ಟ ದೇವರನ್ನು ಪೂಜಿಸುತ್ತಿದ್ದು, ಮನೆಯಲ್ಲಿ ಶಿರ್ಡಿ ಸಾಯಿ ಬಾಬಾ ಫೋಟೋ ಕೂಡ ಇತ್ತು ಎಂದು ಅವರು ಹೇಳುತ್ತಾರೆ.

ಆದರೆ ಮೃತಪಟ್ಟ ಭವೇಶ್ ಮತ್ತು ಲಲಿತ್  ಸೋದರಿ ಸುಜಾತಾ ಮಾತ್ರ ತಮ್ಮ ಸೋದರರಿಗೆ ಯಾವುದೇ ಮಾಂತ್ರಿಕರ ಪರಿಚಯವಿರಲಿಲ್ಲ ಎಂದು ಹೇಳುತ್ತಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X