ಲಿಬಿಯ ಕರಾವಳಿಯಲ್ಲಿ 63 ವಲಸಿಗರು ನಾಪತ್ತೆ

ಟ್ರಿಪೋಲಿ (ಲಿಬಿಯ), ಜು. 3: ಮೆಡಿಟರೇನಿಯನ್ ಸಮುದ್ರದ ಲಿಬಿಯ ಕರಾವಳಿಯಲ್ಲಿ ನಿರಾಶ್ರಿತರನ್ನು ಹೊತ್ತು ಸಾಗುತ್ತಿದ್ದ ದೋಣಿಯೊಂದು ಮುಳುಗಿದ್ದು, 63 ಮಂದಿ ನಾಪತ್ತೆಯಾಗಿದ್ದಾರೆ.
ಜೀವರಕ್ಷಕ ಜಾಕೆಟ್‌ಗಳನ್ನು ಧರಿಸಿದ್ದ 41 ವಲಸಿಗರನ್ನು ರಕ್ಷಿಸಲಾಗಿದೆ ಎಂದು ಲಿಬಿಯ ನೌಕಾಪಡೆಯ ವಕ್ತಾರರೊಬ್ಬರು ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.
ದೋಣಿಯಲ್ಲಿ ಒಟ್ಟು 104 ಮಂದಿ ಪ್ರಯಾಣಿಸುತ್ತಿದ್ದರು ಎಂದು ಬದುಕುಳಿದವರು ಹೇಳಿದ್ದಾರೆ.
ಇದೇ ಪ್ರದೇಶದಲ್ಲಿ ಸೋಮವಾರ ಸಂಭವಿಸಿದ ಎರಡು ಪ್ರಕರಣಗಳಲ್ಲಿ ಲಿಬಿಯ ನೌಕಾಪಡೆಯು 235 ವಲಸಿಗರನ್ನು ರಕ್ಷಿಸಿದೆ. ಅವರ ಪೈಕಿ 54 ಶಿಶುಗಳು ಮತ್ತು 29 ಮಹಿಳೆಯರು.
Next Story





