ಪಡುಬಿದ್ರಿ: ಮನೆಗೆ ನುಗ್ಗಿ ನಗ ನಗದು ಕಳವು
ಪಡುಬಿದ್ರಿ, ಜು.3: ಇನ್ನಾ ಗ್ರಾಮದ ಸಾಂತೂರು ಎಂಬಲ್ಲಿರುವ ಮನೆ ಯೊಂದಕ್ಕೆ ಜು.2ರಂದು ಹಾಡುಹಗಲೇ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಸಾಂತೂರಿನ ರೂಪೇಶ್ ಉಡುಪಿಗೆ ತೆರಳಿದ್ದು, ನಂತರ ಅವರ ಪತ್ನಿ, ತಾಯಿ, ಮಗು ಮನೆಗೆ ಬೀಗ ಹಾಕಿ ಕಡೆಕುಂಜದಲ್ಲಿ ನಡೆದ ದೇವರ ಪೂಜೆಗೆ ಹೊಗಿ ದ್ದರು. ಈ ವೇಳೆ ಮನೆಯ ಮಾಡಿನ ಹೆಂಚು ತೆಗೆದು ಒಳನುಗ್ಗಿದ ಕಳ್ಳರು ಮನೆಯ ಪಡಸಾಲೆ ಯಲ್ಲಿದ್ದ ಕಪಾಟಿನ ಬಾಗಿಲು ತೆರೆದು ಚಿನ್ನದ ಪದಕದ ಸರ, ಮುತ್ತಿನ ಸರ, 7 ಚಿನ್ನದ ಉಂಗುರಗಳು, 2 ಚಿನ್ನದ ಸಪೂರ ಸರ, 2 ಚಿನ್ನದ ಬ್ರಾಸ್ಲೈಟ್ ಹಾಗೂ 10,000 ರೂ. ನಗದು ಕಳವು ಮಾಡಿದ್ದಾರೆ. ಇವುಗಳ ಒಟ್ಟು ಮೌಲ್ಯ 1.90ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





