ಬೆಳ್ಳಂಪಳ್ಳಿ ದೇವಸ್ಥಾನದಲ್ಲಿ ಕಳವು
ಹಿರಿಯಡ್ಕ, ಜು.3: ಬೆಳ್ಳಂಪಳ್ಳಿ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಜು.2 ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ಅಪಾರ ವೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ದೇವಸ್ಥಾನದ ಮುಖ್ಯದ್ವಾರದ ಬಾಗಿಲ ಬೀಗದ ಕೊಂಡಿಯನ್ನು ಮುರಿದು ಒಳ ಪ್ರವೇಶಿಸಿದ ಕಳ್ಳರು ಬಳಿಕ ಗರ್ಭ ಗುಡಿಯ ಬಾಗಿಲನ್ನು ತೆರೆದು ದೇವರ ಪಾನಿಪೀಠದ ಮೇಲೆ ಅಳವಡಿಸಿದ ಬೆಳ್ಳಿಯ ಫ್ರಭಾವಳಿ, ದೇವರ ಬೆಳ್ಳಿಯ ಕವಚ, ಬೆಳ್ಳಿಯ ಸಣ್ಣ ಕವಳಿಗೆ, ಬೆಳ್ಳಿಯ ಸಣ್ಣ ಚೆಂಬು, ಬೆಳ್ಳಿಯ ಸಣ್ಣ ತಟ್ಟೆಗಳು ಕಳವು ಮಾಡಿದ್ದಾರೆ. ಕಳವಾದ ಸುಮಾರು ಎರಡೂವರೆ ಕೆಜಿ ತೂಕದ ಬೆಳ್ಳಿಯ ಆಭರಣಗಳ ಒಟ್ಟು ಮೌಲ್ಯ 70,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





