ಅಬುಧಾಬಿ ಲಾಟರಿ: 13 ಕೋಟಿ ಗೆದ್ದ ಭಾರತೀಯ

ಅಬುಧಾಬಿ (ಯುಎಇ), ಜು. 3: ಅಬುಧಾಬಿ ಲಾಟರಿಯೊಂದರಲ್ಲಿ ಅಬುಧಾಬಿಯಲ್ಲಿ ನೆಲೆಸಿರುವ ಭಾರತೀಯರೊಬ್ಬರು 7 ಮಿಲಿಯ ದಿರ್ಹಮ್ (ಸುಮಾರು 13 ಕೋಟಿ ರೂಪಾಯಿ) ಗೆದ್ದಿದ್ದಾರೆ.
ಇದೇ ಲಾಟರಿಯಲ್ಲಿ ಭಾರತೀಯರು ಹಲವು ಬಹುಮಾನಗಳನ್ನು ಗೆದ್ದಿದ್ದಾರೆ.
‘ಬಿಗ್ ಟಿಕೆಟ್ ಅಬುಧಾಬಿ’ ಲಾಟರಿಯ ಟಿಕೆಟ್ ಖರೀದಿಸಿದ್ದ ಟೋಜೊ ಮ್ಯಾಥ್ಯೂ ಮಂಗಳವಾರ ಬಂಪರ್ ಬಹುಮಾನವನ್ನು ಗೆದ್ದಿದ್ದಾರೆ ಎಂಬುದಾಗಿ ಘೋಷಿಸಲಾಗಿದೆ.
ಇದೇ ಲಾಟರಿಯಲ್ಲಿ ಇತರ 9 ಮಂದಿ ತಲಾ 1 ಲಕ್ಷ ದಿರ್ಹಮ್ (18.66 ಲಕ್ಷ ರೂಪಾಯಿ) ಗೆದ್ದಿದ್ದಾರೆ. ವಿಜೇತರಲ್ಲಿ ಐವರು ಭಾರತೀಯರು, ಓರ್ವ ಪಾಕಿಸ್ತಾನಿ ಮತ್ತು ಓರ್ವ ಕುವೈತ್ ರಾಷ್ಟ್ರೀಯ ಸೇರಿದ್ದಾರೆ.
ಇನ್ನೋರ್ವ ಭಾರತೀಯ ಅಖ್ಲಾಖ್ ಕಾಮಿಲ್ ಕುರೈಶಿ ‘ಬಿಎಂಡಬ್ಲು ಸೀರೀಸ್ 02’ ಕಾರು ಗೆದ್ದಿದ್ದಾರೆ.
Next Story





