ಎಲ್ಲೂರು: ಜು. 6ರಂದು ಮಾಸಿಕ ದಿಕ್ರ್ ಮಜ್ಲೀಸ್
ಮಂಗಳೂರು, ಜು.3: ದಾರುಲ್ ಅಮಾನ್ ಎಜುಕೇಶನ್ ಅಕಾಡಮಿ ವತಿಯಿಂದ ಜು. 6ರಂದು ಮಧ್ಯಾಹ್ನ 3 ಗಂಟೆಗೆ ಉಚ್ಚಿಲ ಸಮೀಪದ ಎಲ್ಲೂರಿನ ಹಿರಾನಗರದಲ್ಲಿ ಮಾಸಿಕ ದಿಕ್ರ್ ಮಜ್ಲೀಸ್ ಮತ್ತು ಧಾರ್ಮಿಕ ಪ್ರವಚನ ಕಾರ್ಯಕ್ರಮ ನಡೆಯಲಿದೆ.
ದಿಕ್ರ್ ಮಜ್ಲೀಸ್ ಮತ್ತು ಧಾರ್ಮಿಕ ಪ್ರವಚನದ ನೇತೃತ್ವವನ್ನು ದಾರುಲ್ ಅಮಾನ್ ಸಂಸ್ಥೆಯ ಮುಖ್ಯಸ್ಥ ಅಲ್‌ಹಾಜ್ ಸಲೀಂ ಮದನಿ ಉಸ್ತಾದ್ ಕುತ್ತಾರು ವಹಿಸಲಿದ್ದಾರೆ. ಶರೀಫ್ ಸಅದಿ ಕಿಲ್ಲೂರು ಭಾಗವಹಿಸಲಿದ್ದಾರೆ.
ಸಂಸ್ಥೆಯ ವತಿಯಿಂದ ಪ್ರತಿ ತಿಂಗಳ ಮೊದಲ ಶುಕ್ರವಾರದಂದು ದಿಕ್ರ್ ಮಜ್ಲೀಸ್ ಮತ್ತು ಧಾರ್ಮಿಕ ಪ್ರವಚನ ಕಾರ್ಯಕ್ರಮ ನಡೆಸುತ್ತಾ ಬರಲಾಗುತ್ತಿದೆ ಎಂದು ಪ್ರಕಟನೆ ತಿಳಿಸಿದೆ.
Next Story





