ಇರಾನ್ ಪರಮಾಣು ಒಪ್ಪಂದದ ದೇಶಗಳ ವಿದೇಶ ಸಚಿವರ ಸಭೆ
ಟೆಹರಾನ್, ಜು. 3: ಇರಾನ್ ಮತ್ತು 2015ರ ಇರಾನ್ ಪರಮಾಣು ಒಪ್ಪಂದದಲ್ಲಿ ಈಗಲೂ ಮುಂದುವರಿದಿರುವ ಪ್ರಬಲ ರಾಷ್ಟ್ರಗಳ ವಿದೇಶ ಸಚಿವರು ಶುಕ್ರವಾರ ಆಸ್ಟ್ರಿಯ ರಾಜಧಾನಿ ವಿಯೆನ್ನಾದಲ್ಲಿ ಸಭೆ ಸೇರಲಿದ್ದಾರೆ ಎಂದು ಇರಾನ್ ರಾಜಧಾನಿ ಟೆಹರಾನ್‌ನಲ್ಲಿ ಸರಕಾರಿ ಸುದ್ದಿ ಸಂಸ್ಥೆ ತಿಳಿಸಿದೆ.
ಬ್ರಿಟನ್, ಚೀನಾ, ಜರ್ಮನಿ ಮತ್ತು ರಶ್ಯಗಳ ವಿದೇಶ ಸಚಿವರು ಇರಾನ್ ವಿದೇಶ ಸಚಿವ ಮುಹಮ್ಮದ್ ಜಾವೇದ್ ಝರೀಫ್ ಜೊತೆ ಮಾತುಕತೆ ನಡೆಸಲಿದ್ದಾರೆ ಎಂದು ‘ಇರ್ನಾ’ ವರದಿ ಮಾಡಿದೆ.
ಎರಡು ತಿಂಗಳ ಹಿಂದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಪ್ಪಂದದಿಂದ ಹಿಂದೆ ಸರಿದ ಬಳಿಕ, ನಡೆಯುತ್ತಿರುವ ಮೊದಲ ಸಭೆ ಇದಾಗಿದೆ.
ಒಪ್ಪಂದದ ಭವಿಷ್ಯದ ಬಗ್ಗೆ ಅವರು ಚರ್ಚೆ ನಡೆಸಲಿದ್ದಾರೆ.
Next Story





