ಮೊದಲ ಟ್ವೆಂಟಿ-20 : ಆಂಗ್ಲರಿಗೆ ಕುಲ್ದೀಪ್ ಪ್ರಹಾರ
ಇಂಗ್ಲೆಂಡ್ 159/8

ಕುಲ್ದೀಪ್ ಯಾದವ್ (24ಕ್ಕೆ 5) ಅವರಿಗೆ ರೈನಾ ಅಭಿನಂದನೆ.
ಮ್ಯಾಂಚೆಸ್ಟರ್, ಜು.3: ಭಾರತ ವಿರುದ್ಧದ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಇಂಗ್ಲೆಂಡ್ ತಂಡ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 159 ರನ್ ಗಳಿಸಿದೆ.
ಕುಲ್ದೀಪ್ ಯಾದವ್ (24ಕ್ಕೆ 5) ಪ್ರಹಾರದ ನಡುವೆಯೂ ಇಂಗ್ಲೆಂಡ್ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತು.
ವಿಕೆಟ್ ಕೀಪರ್ ಜೋಸ್ ಬಟ್ಲರ್ 69 ರನ್ (46ಎ, 8ಬೌ, 2ಸಿ) ರನ್ ಗಳಿಸಿರುವುದು ತಂಡದ ಪರ ದಾಖಲಾದ ಗರಿಷ್ಠ ಸ್ಕೋರ್ ಆಗಿದೆ. ಜೇಸನ್ ರಾಯ್ ಮತ್ತು ಬಟ್ಲರ್ ಇನಿಂಗ್ಸ್ ಆರಂಭಿಸಿ ಮೊದಲ ವಿಕೆಟ್ಗೆ 5 ಓವರ್ಗಳಲ್ಲಿ 50 ಸೇರಿಸಿದರು.
ರಾಯ್ 30 ರನ್ (20ಎ, 5ಬೌ) ಗಳಿಸಿ ಉಮೇಶ್ ಯಾದವ್ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಬಳಿಕ ಅಲೆಕ್ಸ್ ಹೇಲ್ಸ್ (8), ನಾಯಕ ಇಯಾನ್ ಮೊರ್ಗನ್ (7),ಮೊಯಿನ್ ಅಲಿ (6) ಬೇಗನೆ ಔಟಾದರು. ಕೊನೆಯಲ್ಲಿ ಡೇವಿಡ್ ವಿಲ್ಲಿ ಔಟಾಗದೆ 29 ರನ್ ಮತ್ತು ಪ್ಲೆಂಕೆಟ್ ಔಟಾಗದೆ 3 ರನ್ ಗಳಿಸಿದರು.
ಜೋನಿ ಬೈರಿಸ್ಟೋವ್(0), ಜೋ ರೂಟ್(0) ಮತ್ತು ಜೋರ್ಡನ್(0) ಖಾತೆ ತೆರೆಯಲಿಲ್ಲ.
ಉಮೇಶ್ ಯಾದವ್ 21ಕ್ಕೆ 2 ಮತ್ತು ಹಾರ್ದಿಕ್ ಪಾಂಡ್ಯ 33ಕ್ಕೆ 1 ವಿಕೆಟ್ ಪಡೆದರು.





