Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಹಳೆಯ ಮನೆ ಅಥವಾ ಹೊಸಮನೆ....ಖರೀದಿಗೆ...

ಹಳೆಯ ಮನೆ ಅಥವಾ ಹೊಸಮನೆ....ಖರೀದಿಗೆ ಯಾವುದು ಉತ್ತಮ....?

ವಾರ್ತಾಭಾರತಿವಾರ್ತಾಭಾರತಿ4 July 2018 5:35 PM IST
share
ಹಳೆಯ ಮನೆ ಅಥವಾ ಹೊಸಮನೆ....ಖರೀದಿಗೆ ಯಾವುದು ಉತ್ತಮ....?

ಹೊಸ ಹೊಸ ಕಟ್ಟಡಗಳು ಎಲ್ಲೆಡೆಗಳಲ್ಲಿ ತಲೆಯೆತ್ತುತ್ತಿದ್ದು,ಹೊಸ ಫ್ಲಾಟ್‌ಗಳನ್ನು ಇಷ್ಟಪಡುವವರೂ ಹೆಚ್ಚುತ್ತಿದ್ದಾರೆ. ಆದರೆ ಹೆಚ್ಚಿನ ಜನರು ಮರುಮಾರಾಟದ ಮನೆಗಳನ್ನೇ ಖರೀದಿಸಲು ಬಯಸುತ್ತಾರೆ. ಆದರೆ ಹೊಸಮನೆ ಖರೀದಿಸಬೇಕೋ ಹಳೆಯದನ್ನೇ ಖರೀದಿಸಬೇಕೋ ಎಂಬ ಬಗ್ಗೆ ನಿರ್ಧಾರವನ್ನು ಕೈಗೊಳ್ಳುವುದು ಕಠಿಣವೇ ಎನ್ನಬಹುದು.

ಸಾಮಾನ್ಯವಾಗಿ ಹೊಸ ಮನೆಗಳನ್ನು ಬಿಲ್ಡರ್‌ಗಳಿಂದ ಖರೀದಿಸಲಾಗುತ್ತದೆ ಮತ್ತು ಮರುಮಾರಾಟದ ಮನೆಗಳನ್ನು ಅದರ ಮಾಲಿಕರಿಂದ ಖರೀದಿಸಲಾಗುತ್ತದೆ. ಹೊಸಮನೆಯ ಖರೀದಿಯು ಸೂಕ್ತವೇ? ಈ ಪ್ರಶ್ನೆಗೆ ಉತ್ತರ ಜೀವನಶೈಲಿ ಆದ್ಯತೆಗಳು,ಹಣಕಾಸು ವ್ಯವಸ್ಥೆ ಮತ್ತು ಇತರ ಆದ್ಯತೆಗಳನ್ನು ಅವಲಂಬಿಸಿರುತ್ತದೆ.

ಎಷ್ಟೋ ಬಾರಿ ಮರುಮಾರಾಟದ ಮನೆಗೆ ನವೀಕರಣದ ಅಗತ್ಯವಿದೆ ಎನ್ನುವುದು ಗೊತ್ತಿದ್ದರೂ ಅದನ್ನು ಖರೀದಿಸಲು ಕೆಲವು ಕಾರಣಗಳಿವೆ. ನೀವು ನಗರದ ನಿರ್ದಿಷ್ಟ ಪ್ರದೇಶದಲ್ಲಿ ಮನೆ ಹೊಂದಲು ಬಯಸಿರಬಹುದು ಅಥವಾ ನಗರಕ್ಕೆ ಸಮೀಪದ ಉಪನಗರಗಳಲ್ಲಿ ಮನೆ ಮಾಡಲು ಬಯಸಿರಬಹುದು. ಇಂತಹ ಸಂದರ್ಭಗಳಲ್ಲಿ ಹೊಸಮನೆಗಳು ಲಭ್ಯವಿಲ್ಲದಿದ್ದರೆ ಈಗಾಗಲೇ ಇರುವ ಮನೆಯನ್ನು ನೀವು ಖರೀದಿಸಬೇಕಾಗುತ್ತದೆ. ಇಂತಹ ಮನೆಯನ್ನು ನಿಮ್ಮ ಅಭಿರುಚಿಗೆ ತಕ್ಕಂತೆ ನವೀಕರಿಸಲು ಸಾಕಷ್ಟು ಹಣ ಮತ್ತು ಸಮಯವನ್ನು ವ್ಯಯಿಸಲೂ ನೀವು ಸಿದ್ಧರಿರಬೇಕಾಗುತ್ತದೆ. ಕಡಿಮೆ ಬೆಲೆಯಲ್ಲಿ ಸಿಗುತ್ತದೆ ಎಂಬ ಕಾರಣಕ್ಕೆ ಹಳೆಯ ಮನೆಗಳನ್ನು ಖರೀದಿಸಲು ಜನರು ಒಲವು ತೋರಿಸಹುದು. ಆದರೆ ಹೊಸಮನೆಯ ಖರೀದಿಯಲ್ಲಿ ಕೆಲವು ಲಾಭಗಳಿದ್ದು,ಅದು ಉತ್ತಮ ಆಯ್ಕೆಯಾಗಬಹುದು.

ಮನೆಯನ್ನು ಖರೀದಿಸುವವರು ತಮ್ಮದೇ ಆದ ಬಜೆಟ್ ಹೊಂದಿರುತ್ತಾರೆ ಮತ್ತು ಬೆಲೆಯು ಅದನ್ನು ಮೀರದಂತೆ ಎಚ್ಚರಿಕೆ ವಹಿಸುತ್ತಾರೆ. ಆದರೆ ಅವರು ಮನೆಯ ಬೆಲೆಯ ಜೊತೆಗೆ ನೋಂದಣಿ ಶುಲ್ಕ,ವರ್ಗಾವಣೆ ಶುಲ್ಕ,ಸ್ಟಾಂಪ್ ಶುಲ್ಕ,ಯುಟಿಲಿಟಿ ಶುಲ್ಕಗಳಂತಹ ಇತರ ಹಲವಾರು ಶುಲ್ಕಗಳನ್ನೂ ಭರಿಸಬೇಕಾಗುತ್ತದೆ. ಅಲ್ಲದೆ ಮರುಮಾರಾಟದ ಮನೆಗಳಿಗೆ ರಿಪೇರಿ ಮತ್ತು ನಿರ್ವಹಣೆಯ ಅಗತ್ಯವೂ ಇರುತ್ತದೆ. ಇನ್ನೊಂದೆಡೆ,ಅಭಿವೃದ್ಧಿಗೊಳ್ಳುತ್ತಿರುವ ಬಡಾವಣೆಗಳಲ್ಲಿ ಅಥವಾ ಉಪನಗರಗಳಲ್ಲಿ ನಿರ್ಮಾಣಗೊಂಡಿರುವ ಹೊಸಮನೆಗಳು ನಗರಗಳಲ್ಲಿಯ ಪ್ರಮುಖ ಪ್ರದೇಶಗಳಲ್ಲಿನ ಮರುಮಾರಾಟದ ಮನೆಗಳಿಗೆ ಹೋಲಿಸಿದರೆ ಅಗ್ಗದ ಬೆಲೆಗಳಲ್ಲಿ ಸಿಗುತ್ತವೆ.

ಹೆಚ್ಚಿನ ವಿದ್ಯುತ್ ಬಿಲ್ ಪಾವತಿಸಬೇಕಾಗಬಹುದು ಎಂಬಂತಹ ಆತಂಕಗಳಿದ್ದರೆ ಮತ್ತು ಉತ್ತಮ ಪರಿಸರದ ಬಗ್ಗೆ ನಿಜವಾದ ಕಳಕಳಿಯಿದ್ದರೆ ವ್ಯಾವಹಾರಿಕವಾಗಿ ಹೊಸಮನೆಯು ಒಳ್ಳೆಯ ಆಯ್ಕೆಯಾಗುತ್ತದೆ. ಇಂದು ನಿರ್ಮಾಣಗೊಳ್ಳುತ್ತಿರುವ ಮನೆಗಳು ಕೆಲವು ವರ್ಷಗಳ ಹಿಂದೆ ಇದ್ದದ್ದಕ್ಕೆ ಹೋಲಿಸಿದರೆ ಶಕ್ತಿಯ ದಕ್ಷತೆಗಾಗಿ ಕಠಿಣವಾದ ರಾಷ್ಟ್ರೀಯ ಸಂಹಿತೆಯ ಮಾನದಂಡಗಳನ್ನು ಪೂರೈಸಬೇಕಾಗುತ್ತದೆ. ಹೆಚ್ಚಿನ ಹೊಸದಾಗಿ ನಿರ್ಮಾಣಗೊಂಡ ಮನೆಗಳು ಗೋಡೆಗಳು, ಛಾವಣಿಗಳು, ಕಿಡಕಿಗಳು,ಬಾಗಿಲುಗಳು ಮತ್ತು ಅಪ್ಲೈಯನ್ಸ್‌ಸ್ ಪ್ಯಾಕೇಜ್‌ಗಳಿಗೂ ಶಕ್ತಿ ಪ್ರಮಾಣೀಕರಣಗಳನ್ನು ಹೊಂದಿರುತ್ತವೆ. ವಾಸ್ತವದಲ್ಲಿ ಮರುಮಾರಾಟದ ಮನೆಗಳು ದಶಕಗಳ ಹಿಂದೆ ತುಂಬ ಕಡಿಮೆ ಮಾನದಂಡಗಳನ್ವಯ ನಿರ್ಮಾಣಗೊಂಡಿರುವುದರಿಂದ ಇಂತಹ ಪ್ರಮಾಣೀಕರಣಗಳನ್ನು ಹೊಂದಿರುವುದಿಲ್ಲ. ಈಗಾಗಲೇ ಇರುವ ಮನೆಯನ್ನು ಶಕ್ತಿಯ ಬಳಕೆಯನ್ನು ಉಳಿಸುವ ದಕ್ಷ ಮನೆಯನ್ನಾಗಿಸಲು ಹಣವನ್ನು ವ್ಯಯಿಸಬೇಕಾಗುತ್ತದೆ. ಇದೇ ವೇಳೆ ಹೊಸ ಮನೆಗಳು ಮನೆಯೊಳಗಿನ ವಾಯುವಿನ ಗುಣಮಟ್ಟವನ್ನು ಹೆಚ್ಚಿಸುವ ಏರ್ ಫಿಲ್ಟರೇಷನ್ ಹೊಂದಿರುತ್ತವೆ ಮತ್ತು ಇದರಿಂದ ಅಂತಹ ಮನೆಗಳನ್ನು ಖರೀದಿಸುವವರು ಅಸ್ತಮಾ ಅಥವಾ ಅಲರ್ಜಿಗಳಿಂದ ಪೀಡಿತರಾಗುವ ಸಾಧ್ಯತೆಗಳು ಕಡಿಮೆಯಾಗಿರುತ್ತವೆ.

ಹೊಸಮನೆಗಳು ಈಗಾಗಲೇ ಸುರಕ್ಷಿತ ಫಿಟಿಂಗ್‌ಗಳು ಮತ್ತು ಫಿಕ್ಸ್‌ಚರ್‌ಗಳನ್ನು ಹೊಂದಿರುವುದರಿಂದ ಸುದೀರ್ಘ ಕಾಲ ಬಾಳಿಕೆ ಬರುತ್ತವೆ. ಆದರೆ ಮರುಮಾರಾಟದ ಮನೆಗಳು ಯಾವಾಗಲೂ ವೈರಿಂಗ್ ಮತ್ತು ಫಿಟಿಂಗ್‌ಗಳ ಸಮಸ್ಯೆಗಳನ್ನು ಹೊಂದಿರುತ್ತವೆ. ನೀವು ಹಳೆಯ ಮನೆಯನ್ನು ಖರೀದಿಸುವಾಗ ಅದು ತನ್ನದೇ ಆದ ವಿನ್ಯಾಸವನ್ನು ಹೊಂದಿರುತ್ತದೆ ಮತ್ತು ಅದನ್ನು ಬದಲಿಸಲು ನಿಮಗೆ ಅವಕಾಶಗಳಿರುವುದಿಲ್ಲ. ಆದರೆ ಹೊಸಮನೆಯನ್ನು ಖರೀದಿಸುವಾಗ ಅದು ನಿರ್ಮಾಣ ಹಂತದಲ್ಲಿರುವಾಗ ನೀವು ಬಯಸುವ ವಿನ್ಯಾಸದ ಬಗ್ಗೆ ಬಿಲ್ಡರ್‌ಗೆ ಸೂಚಿಸಬಹುದಾಗಿದೆ.

ಮರುಮಾರಾಟದ ಮನೆ ಖರೀದಿ ಪ್ರಕ್ರಿಯೆಯು ತುಂಬ ಸುದೀರ್ಘವಾಗಿರುತ್ತದೆ. ಮಾರಾಟಗಾರನ ಹಿನ್ನೆಲೆಯ ಪರಿಶೀಲನೆ,ಹಕ್ಕುಪತ್ರ ಪರಿಶೀಲನೆ,ಈಗಾಗಲೇ ಇರುವ ಗೃಹಸಾಲವನ್ನು ತೀರಿಸಲಾಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು, ಖರೀದಿದಾರ ಹೊಸದಾಗಿ ಗೃಹಸಾಲವನ್ನು ಮಂಜೂರು ಮಾಡಿಸಿಕೊಳ್ಳುವುದು ಮತ್ತು ಆಸ್ತಿಯ ನೋಂದಣಿ ಇತ್ಯಾದಿಗಳು ಇವುಗಳಲ್ಲಿ ಸೇರಿರುತ್ತದೆ. ಆದರೆ ಹೊಸಮನೆಯನ್ನು ಖರೀದಿಸುವಾಗ ಹೆಚ್ಚಾಗಿ ಬಿಲ್ಡರ್‌ಗಳೇ ಈ ಎಲ್ಲ ಪ್ರಕ್ರಿಯೆಯ ಬಗ್ಗೆ ಕಾಳಜಿ ವಹಿಸುತ್ತಾರೆ. ತಾವು ಕಾಯಂ ಆಗಿ ಒಂದೇ ಮನೆಯಲ್ಲಿ ವಾಸವಾಗಿರುತ್ತೇವೆ ಎಂದು ಜನರು ಭಾವಿಸಿರುತ್ತಾರೆ. ಆದರೆ ಹೆಚ್ಚಿನವರು ಯಾವುದಾದರೂ ಕಾಲಘಟ್ಟದಲ್ಲಿ,ಬೇರೆ ನಗರ ಅಥವಾ ಬೇರೆ ದೇಶಕ್ಕೆ ಸ್ಥಳಾಂತರದಂತಹ ಸಂದರ್ಭಗಳಲ್ಲಿ ತಮ್ಮ ಮನೆಯನ್ನ್ನು ಮಾರಾಟ ಮಾಡಲು ಮುಂದಾಗುತ್ತಾರೆ. ಆದರೆ 20 ವರ್ಷಗಳಷ್ಟು ಹಳೆಯದಾದ ಮನೆಗೆ ಐದು ವರ್ಷಗಳಷ್ಟು ಹಳೆಯದಾದ ಮನೆಗೆ ಸಿಗುವಷ್ಟೇ ವೌಲ್ಯ ದೊರೆಯುವುದಿಲ್ಲ. ಮನೆ ಹೆಚು ಹಳೆಯದಾದಂತೆ ಮರುಮಾರಾಟದ ವೌಲ್ಯವೂ ಕಡಿಮೆಯಾಗುತ್ತದೆ.

ಆದರೆ ಹೊಸಮನೆಯನ್ನು ಖರೀದಿಸಬೇಕೋ ಅಥವಾ ಹಳೆಯ ಮನೆಯನ್ನೇ ಎನ್ನುವ ಬಗ್ಗೆ ಅಂತಿಮ ನಿರ್ಧಾರವನ್ನು ಖರೀದಿದಾರನೇ ತೆಗೆದುಕೊಳ್ಳಬೇಕಾಗುತ್ತದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X