ಮನುಷ್ಯನನ್ನು ಪ್ರೀತಿಸುವ ಮನೋಭಾವ ಹೆಚ್ಚಲಿ: ರೋನಾಲ್ಢ್ ಗೋಮ್ಸ್

ಮಂಗಳೂರು, ಜು.4: ಮನುಷ್ಯನನ್ನು ಪ್ರೀತಿಸುವ ಮನೋಭಾವವು ವೈಯಕ್ತಿಕ ವರ್ಚಸನ್ನು ಹೆಚ್ಚಿಸುತ್ತದೆ. ಕೆಲಸದಲ್ಲಿನ ಶ್ರದ್ಧೆ ಮತ್ತು ನಿಸ್ವಾರ್ಥ ನಿಜವಾದ ಸಂತೃಪ್ತಿಯನ್ನು ನೀಡುತ್ತದೆ ಎಂದು ಲಯನ್ಸ್ ಜಿಲ್ಲಾ ಉಪರಾಜ್ಯಪಾಲ ರೋನಾಲ್ಡ್ ಐಸೆಕ್ ಗೋಮ್ಸ್ ತಿಳಿಸಿದ್ದಾರೆ.
ನಗರದ ಮಂಗಳಾದೇವಿ ಲಯನ್ಸ್ ಕ್ಲಬ್‌ನ 2018-19ನೇ ಸಾಲಿನ ನೂತನ ತಂಡಕ್ಕೆ ಪದಗ್ರಹಣ ನೆರವೇರಿಸಿ ಅವರು ಮಾತನಾಡಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ಯಶವಂತ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಮಂಗಳಾದೇವಿ ಲಯನ್ಸ್ ಕ್ಲಬ್ ನಿರ್ಗಮನಾಧ್ಯಕ್ಷ ದಯಾನಂದ್ ಬೋಳಾರ್, ಪ್ರಾಂತ ಅಧ್ಯಕ್ಷ ಹರೀಶ್ ಶೆಟ್ಟಿ, ವಲಯಾಧ್ಯಕ್ಷ ಅನಿಲ್‌ಕುಮಾರ್, ಲಯನ್ಸ್ ಕ್ಲಬ್ ಕಾರ್ಯದರ್ಶಿ ನರೇಶ್‌ಕುಮಾರ್, ಕೋಶಾಧಿಕಾರಿ ದಿವಾಕರ್, ಲಯನೆಸ್ ಕ್ಲಬ್ ಅಧ್ಯಕ್ಷೆ ಕುಶಲಾಕ್ಷಿ ಯಶವಂತ್, ಕಾರ್ಯದರ್ಶಿ ಶಕಿಲಾ ನರೇಶ್, ಕೋಶಾಧಿಕಾರಿ ರಶ್ಮಿ ಉಪಸ್ಥಿತರಿದ್ದರು.
Next Story





