ಲಾರಿ-ಕಾರು ಮುಖಾಮುಖಿ ಢಿಕ್ಕಿ: ಐವರು ಸ್ಥಳದಲ್ಲೇ ಮೃತ್ಯು
ತುಮಕೂರು,ಜು.04: ಮದುವೆ ನಿಶ್ಚಿತಾರ್ಥ ಮುಗಿಸಿ ಹಿಂದಿರುಗುವ ವೇಳೆ ಕಾರೊಂದು ಎದುರಿನಿಂದ ಬಂದ ಸಿಮೆಂಟ್ ಲಾರಿಗೆ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಐವರು ಮೃತಪಟ್ಟಿರುವ ಘಟನೆ ಮಧುಗಿರಿ ಸಮೀಪದ ಕೆರೆಗಳ ಪಾಳ್ಯ ಗ್ರಾಮದ ಬಳಿ ನಡೆದಿದೆ.
ಆಂಧ್ರದ ಕಲ್ಯಾಣದುರ್ಗದ ಸಮೀಪದ ಕುಂದರ್ಪಿಯಲ್ಲಿ ನಡೆದ ಬೆಂಗಳೂರಿನ ವ್ಯಕ್ತಿಯೊಬ್ಬರ ಮದುವೆ ನಿಶ್ಚಿತಾರ್ಥದಲ್ಲಿ ಭಾಗವಹಿಸಿ ಹಿಂದಿರುಗುವ ವೇಳೆ ಕೆರೆಗಳ ಪಾಳ್ಯ ಸಮೀಪ ಸಿಮೆಂಟ್ ತುಂಬಿಕೊಂಡು ಹೊರಟಿದ್ದ ಅರುಣಾಚಲಂ ಎಂಬ ಬೋರ್ಡಿನ ಲಾರಿಗೆ ಢಿಕ್ಕಿ ಹೊಡದಿದೆ. ಪರಿಣಾಮ, ಕಾರಿನಲ್ಲಿದ್ದ ಮುರುಳಿ(20) ಮಂಜುನಾಥ್ (24) ದಿನೇಶ್ (24) ರಾಮ್ ಮೋಹನ್ (23) ಮತ್ತು ಶಿವಪ್ರಸಾದ್(25) ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮಧುಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಖಾಮುಖಿ ಢಿಕ್ಕಿಯ ರಭಸಕ್ಕೆ ಎರಡು ವಾಹನಗಳು ಅಂಟಿಕೊಂಡಿದ್ದು, ಹಿಟಾಚಿ ಮೂಲಕ ವಾಹನಗಳನ್ನು ಬೇರ್ಪಡಿಸಿ, ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.