ಯುವ ಬ್ರಾಹ್ಮಣ ಪರಿಷತ್‌ನಿಂದ ಸಾಧಕರಿಗೆ ಸನ್ಮಾನ

ಉಡುಪಿ, ಜು.4: ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪರಿಷತ್ತಿನ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ ಇತ್ತೀಚೆಗೆ ಕೃಷ್ಣ ಮಠದ ಅನ್ನಬ್ರಹ್ಮ ಸಭಾಂಗಣದಲ್ಲಿ ನಡೆಯಿತು.
ಸಾಧಕರನ್ನು ಸನ್ಮಾನಿಸಿದ ಮಾತನಾಡಿದ ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು,ಬ್ರಾಹ್ಮಣ ಸಮಾಜದವರು ಪ್ರತಿಯೊಂದು ಕ್ಷೇತ್ರದಲ್ಲಿಯೂ ಮುಂಚೂಣಿಯಲ್ಲಿದ್ದು ಸಮಾಜಕ್ಕೆ ಒಳ್ಳೆಯ ಕೀರ್ತಿಯನ್ನು ತಂದಿದ್ದಾರೆ. ತಮ್ಮ ತಮ್ಮ ಮನೆಯಲ್ಲಿ ಪ್ರತಿಯೊಬ್ಬರೂ ವಿಪ್ರರಿಗೆ ವಿಹಿತವಾದ ಧಾರ್ಮಿಕ ಅನುಷ್ಠಾನಗಳನ್ನು ತಪ್ಪದೆ ಮಾಡಿದರೆ ಮಾತ್ರ ಬ್ರಾಹ್ಮಣ್ಯವನ್ನು ಉಳಿಸಲು ಸಾಧ್ಯ ಎಂದರು.
ಆದುದರಿಂದ ಯುವ ಬ್ರಾಹ್ಮಣ ಪರಿಷತ್ತಿನವರು ಪ್ರತಿಯೊಂದು ಮನೆಯಲ್ಲಿಯೂ ಪ್ರತಿಯೊಬ್ಬರೂ ನಿತ್ಯಾನುಷ್ಠಾನ ಮಾಡುವಲ್ಲಿ ಕಾಳಜಿ ವಹಿಸಬೇಕು. ಪರಿಷತ್ ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ, ಕ್ರೀಡಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದು, ಇನ್ನೂ ಮುಂದೆಯೂ ಬ್ರಾಹ್ಮಣ ಸಮಾಜಕ್ಕೆ ಹೆಚ್ಚು ಸೇವೆ ಸಲ್ಲಿಸುವಂತಾಗಲಿ ಎಂದು ಶುಭ ಹಾರೈಸಿದರು.ಉಡುಪಿ ಶಾಸಕ ಕೆ.ರಘುಪತಿ ಭಟ್, ಪತ್ರಕರ್ತ ಜನಾರ್ದನ್ ಕೊಡವೂರು, ಡಾ.ವಿಜಯೆಂದ್ರ, ಭಾಸ್ಕರ್ ರಾವ್ ಹಾಗೂ ರಂಗನಾಥ ಸಾಮಗ ಇವರನ್ನು ರ್ಯಾಯ ಶ್ರೀಪಾದರು ಸನ್ಮಾನಿಸಿದರು.
ಉಡುಪಿ ಶಾಸಕ ಕೆ.ರಘುಪತಿ ಟ್,ಪತ್ರಕರ್ತಜನಾರ್ದನ್‌ಕೊಡವೂರು,ಡಾ.ವಿಜಯೆಂದ್ರ, ಭಾಸ್ಕರ್ ರಾವ್ ಹಾಗೂ ರಂಗನಾಥ ಸಾಮಗ ಇವರನ್ನು ಪರ್ಯಾಯ ಶ್ರೀಪಾದರು ಸನ್ಮಾನಿಸಿದರು. ಪರಿಷತ್ತಿನ ಅಧ್ಯಕ್ಷ ವಿಷ್ಣುಪ್ರಸಾದ ಪಾಡಿಗಾರು, ಕಾರ್ಯದರ್ಶಿ ಪ್ರವೀಣ ಉಪಾಧ್ಯ, ಕೋಶಾಧಿಕಾರಿ ಕುಮಾರಸ್ವಾಮಿ ಉಡುಪ ಉಪಸ್ಥಿತರಿದ್ದರು.
ವಿಷ್ಣುಪ್ರಸಾದ ಪಾಡಿಗಾರು ಸ್ವಾಗತಿಸಿ, ಪ್ರವೀಣ ಉಪಾಧ್ಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.







