ಜು.5ರಿಂದ ‘ಸ್ವಚ್ಛ ಗೆಳತಿ’ ಜಾಗೃತಿ ಅಭಿಯಾನ ತರಬೇತಿ
ಮಂಗಳೂರು, ಜು.4: ನಗರದ ಕೆನರಾ ಕಾಲೇಜು ಹಾಗೂ ಸ್ಕೂಲ್ ಆಫ್ ಸೋಶಿಯಲ್ ವರ್ಕ್, ರೋಶನಿ ನಿಲಯದಲ್ಲಿ ಜು. 5 ಮತ್ತು 6ರಂದು ಬೆಳಗ್ಗೆ 9:30ರಿಂದ 2:30 ರವರೆಗೆ ‘ಸ್ವಚ್ಛ ಗೆಳತಿ’ ಜಾಗೃತಿ ಅಭಿಯಾನ ತರಬೇತಿ ನಡೆಯಲಿದೆ.
ದ.ಕ. ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ನೆರವು ಘಟಕ, ಮಂಗಳೂರು ತಾಪಂ, ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ ಇವುಗಳ ಜಂಟಿ ಆಶ್ರಯದಲ್ಲಿ ‘ಸ್ವಚ್ಛ ಗೆಳತಿ’ ಋತುಸ್ರಾವ ಜಾಗೃತಿ ಅಭಿಯಾನದ ತಾಲೂಕು ಮಟ್ಟದ ತರಬೇತಿ ಕಾರ್ಯಕ್ರಮ ನಡೆಯಲಿದೆ.
ಜು.9ರಂದು ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ‘ಸ್ವಚ್ಛ ಗೆಳತಿ’ ಜಾಗೃತಿ ಅಭಿಯಾನ ತರಬೇತಿ ಹಮ್ಮಿಕೊಳ್ಳಲಾಗಿದೆ ಎಂದು ತಾಪಂ ಇಒ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





