ದ.ಕ. ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ: ಅರ್ಜಿ ಆಹ್ವಾನ
ಮಂಗಳೂರು, ಜು.4: ದ.ಕ. ಜಿಲ್ಲಾ ಸರಕಾರಿ ಗ್ರೂಪ್ ‘ಡಿ’ ನೌಕರರ ಸದಸ್ಯರ ಮಕ್ಕಳಿಗೆ 2017-18ನೇ ಸಾಲಿನ ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಜಿಲ್ಲಾ ವ್ಯಾಪ್ತಿಯ ಸಂಘದ ಸದಸ್ಯರ ಮಕ್ಕಳಿಂದ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಿದೆ.
ಅರ್ಜಿ ಸಲ್ಲಿಸುವವರು ಇಲಾಖಾ ಮುಖ್ಯಸ್ಥರಿಂದ ಅಂಕಪಟ್ಟಿ ದೃಢೀಕರಣ ಮತ್ತು ಸಂಘದಿಂದ ಅರ್ಜಿ ನಮೂನೆಯನ್ನು ಪಡೆದು ಆ.31ರಂದು ಸಂಘದ ಪದಾಧಿಕಾರಿಗಳಿಗೆ ಅಥವಾ ಸಂಘದ ಕಚೇರಿಗೆ ತಲುಪಿಸಬೇಕು.
ಜು.14ರಂದು ಬೆಳಗ್ಗೆ 10:30 ಕ್ಕೆ ಸಂಘದ ಸಭಾಭವನದಲ್ಲಿ ವಾರ್ಷಿಕ ಮಹಾಸಭೆ ಜರುಗಲಿದೆ. ಸಭೆಯಲ್ಲಿ 2017-18 ನೇ ಸಾಲಿನಲ್ಲಿ ಜಿಲ್ಲಾ ಮಟ್ಟದ ಸೇವೆಯಿಂದ ನಿವೃತ್ತಿ ಹೊಂದಿರುವ ಸದಸ್ಯರಿಗೆ ಹಾಗೂ ಪದೋನ್ನತಿ ಹೊಂದಿರುವ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
Next Story