ಸುಪ್ರೀಂ ತೀರ್ಪಿನ ಬೆನ್ನಲ್ಲೇ ನಿಯೋಜನೆ, ವರ್ಗಾವಣೆ ಅಧಿಕಾರ ಮರಳಿ ಪಡೆದ ದಿಲ್ಲಿ ಸರಕಾರ

ಹೊಸದಿಲ್ಲಿ,ಜು.4: ಬುಧವಾರ ಸರ್ವೋಚ್ಚ ನ್ಯಾಯಾಲಯವು ತನ್ನ ಪರವಾಗಿ ತೀರ್ಪು ನೀಡಿದ ಬೆನ್ನಲ್ಲೇ ಐಎಎಸ್ ಮತ್ತು ಇತರ ಅಧಿಕಾರಿಗಳ ವರ್ಗಾವಣೆ ಮತ್ತು ನಿಯೋಜನೆಯ ಅಧಿಕಾರವನ್ನು ತಾನು ಉಪ ರಾಜ್ಯಪಾಲರಿಂದ ವಾಪಸ್ ತೆಗೆದುಕೊಳ್ಳುತ್ತಿರುವುದಾಗಿ ದಿಲ್ಲಿ ಸರಕಾರವು ಹೇಳಿತು.
ಎರಡು ವರ್ಷಗಳ ಹಿಂದೆ ಉಚ್ಚ ನ್ಯಾಯಾಲಯದ ನಿರ್ಧಾರದಂತೆ ಅಧಿಕಾರಿಗಳ ವರ್ಗಾವಣೆ ಮತ್ತು ನಿಯೋಜನೆಯ ಅಧಿಕಾರವನ್ನು ಚುನಾಯಿತ ಸರಕಾರದಿಂದ ಕಿತ್ತುಕೊಂಡು ಉಪ ರಾಜ್ಯಪಾಲರು ಮತ್ತು ಇತರ ಅಧಿಕಾರಿಗಳಿಗೆ ನೀಡಲಾಗಿತ್ತು. ಸೇವೆಗಳ ಸಚಿವನಾಗಿ ತಾನು ತಕ್ಷಣದಿಂದಲೇ ಈ ವ್ಯವಸ್ಥೆಯ ಬದಲಾವಣೆಗೆ ಮತ್ತು ಅಧಿಕಾರವನ್ನು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳಿಗೆ ಮರಳಿಸಲು ಆದೇಶಿಸಿದ್ದೇನೆ ಎಂದು ದಿಲ್ಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
Next Story





