ಜುಗಾರಿ: ಎಂಟು ಮಂದಿ ಬಂಧನ
ಕುಂದಾಪುರ, ಜು.4: ಗೋಪಾಡಿ ಗ್ರಾಮದ ಪಡುಚಾವಡಿಬೆಟ್ಟು ಸ್ಮಶಾನದ ಬಳಿ ಜು. 3ರಂದು ಸಂಜೆ ವೇಳೆ ಅಂದರ್ ಬಾಹರ್ ಜುಗಾರಿ ಆಡುತ್ತಿದ್ದ ಸತೀಶ್ ಮೊಗವೀರ, ಉದಯ ಮೊಗವೀರ, ಅರುಣ್, ಪ್ರಕಾಶ ಮೊಗವೀರ, ಜಯಂತ್, ಕೃಷ್ಣ ಮೊಗವೀರ ಎಂಬವರನ್ನು ಕುಂದಾಪುರ ಪೊಲೀಸರು ಬಂಧಿಸಿ, 1,470ರೂ. ನಗದು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟ್ಕಾ ಜುಗಾರಿ ಆಟಕ್ಕೆ ಸಂಬಂಧಿಸಿ ಉಡುಪಿ ನಗರದ ಬಿಎಸ್‌ಎನ್‌ಎಲ್ ರಸ್ತೆಯ ಬಳಿ ಜು.3ರಂದು ಸಂಜೆ ವೇಳೆ ಉಡುಪಿ ನಗರ ಪೊಲೀಸರು ಮಲ್ಪೆಯ ಗಣೇಶ್ ಶೆಣೈ(26) ಎಂಬಾತನನ್ನು 1,560 ರೂ. ನಗದು ಸಹಿತ ಹಾಗೂ ಜು.4ರಂದು ಬೆಳಗ್ಗೆ ಕುಂದಾಪುರ ಪೊಲೀಸರು ಕುಂದಾಪುರ ಪಾರಿಜಾತ ಸರ್ಕಲ್ ಬಳಿ ಕಂದಾವರ ಗ್ರಾಮದ ಗೋಪಾಲ ದೇವಾಡಿಗ(60) ಎಂಬ ವರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





