ಸುಳ್ಳು ದಾಖಲೆ ಸೃಷ್ಠಿ ಪ್ರಕರಣ: ಆರೋಪಿಗಳಿಗೆ ನಿರೀಕ್ಷಣಾ ಜಾಮೀನು
ಪುತ್ತೂರು, ಜು. 4: ಜಮೀನಿಗೆ ಸಂಬಂಧಿಸಿ ನಕಲಿ ಸಹಿಯನ್ನು ಮಾಡಿ ಸುಳ್ಳು ದಾಖಲೆ ಸೃಷ್ಟಿಸಿ ಅನ್ನು ನೈಜವೆಂದು ಉಪಯೋಗಿಸಿದ ಪ್ರಕರಣದ ಆರೋಪಿಗಳಿಗೆ 5ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಿರಿಕ್ಷಣಾ ಜಾಮೀನು ಮಂಜೂರು ಮಾಡಿದೆ.
ಕೊಡಿಂಬಾಳ ಗ್ರಾಮದ ಜಮಿನಿಗೆ ಸಂಬಂಧಿಸಿ ನಾರಾಯಣ, ಅಚ್ಚುತ ಮತ್ತು ಯಶೋಧಾ ಎಂಬವರು ದೂರುದಾರರಾದ ಗೀತಾ ಪೈ ಮತ್ತು ಅವರ ತಾಯಿ ಆಶಾ ಪೈಯವರ ನಕಲಿ ಸಹಿಯನ್ನು ದಾಖಲೆಗಳನ್ನು ಸೃಷ್ಟಿಸಿ ಅದನ್ನು ನೈಜವೆಂದು ಉಪಯೋಗಿಸಿ, ನ್ಯಾಯಾಲಯದಲ್ಲಿ ಸುಳ್ಳು ಸಾಕ್ಷಿಯನ್ನು ನೀಡಿ ಮೋಸ ಮತ್ತು ವಂಚನೆ ಮಾಡುವ ಉದ್ದೇಶದಿಂದ ವಿವಾದಿತ ಜಾಗದಲ್ಲಿರುವ ಕಟ್ಟಡದ ಬಾಡಿಗೆಗೆ ಅನುಭವಿಸಿಕೊಂಡಿದ್ದು, ಅಲ್ಲದೆ ಆರೋಪಿಗಳು ನ್ಯಾಯಾಲಯದಲ್ಲಿ ಸುಳ್ಳು ದಾವೆಯನ್ನು ದಾಖಲು ಮಾಡಿದ್ದಾರೆ ಎಂದು ಗೀತಾ ಪೈ ಎಂಬವರು ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು.
ಈ ಕುರಿತು ನ್ಯಾಯಾಲಯ ತನಿಖೆ ಮಾಡುವಂತೆ ಪೊಲೀಸರಿಗೆ ಆದೇಶಿಸಿತ್ತು. ದೂರನ್ನು ಆಧಾರಿಸಿ ಕಡಬ ಪೊಲೀಸರು ಆರೋಪಿಗಳವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರುಗೊಳಿಸಿದೆ. ಆರೋಪಿ ಪರ ಚಾಣಕ್ಯ ಲಾ ಚೇಂಬರ್ಸ್ ನ್ಯಾಯವಾದಿ ಶ್ಯಾಮ ಪ್ರಸಾದ್ ಕೈಲಾರ್, ಸುಮಾ ಟಿ.ಆರ್ ಮತ್ತು ನಮಿತಾ ಬಿ ವಾದಿಸಿದ್ದರು.





