ಪಂಪ್‌ವೆಲ್: ತಖ್ವಾ ಜುಮಾ ಮಸೀದಿಯಲ್ಲಿ ಹಜ್ ತರಬೇತಿ

ಮಂಗಳೂರು, ಜು.5: ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ಬೇಕಲ ಪಿ.ಎಂ. ಇಬ್ರಾಹೀಂ ಮುಸ್ಲಿಯಾರ್ ನೇತೃತ್ವದಲ್ಲಿ ಪಂಪ್‌ವೆಲ್‌ನ ತಖ್ವಾ ಜುಮಾ ಮಸೀದಿಯಲ್ಲಿ ಹಜ್ ತರಬೇತಿ ನೀಡಲಾಯಿತು.
ಪ್ರಸಕ್ತ ಸಾಲಿನಲ್ಲಿ ಹಜ್‌ಯಾತ್ರೆಗೈಯಲಿರುವ ದ.ಕ. ಹಾಗೂ ಉಡುಪಿ ಜಿಲ್ಲೆಯ ಯಾತ್ರಾರ್ಥಿಗಳು ಭಾಗವಹಿಸಿದ್ದರು. ಈ ಸಂದರ್ಭ ತಖ್ವಾ ಜುಮಾ ಮಸೀದಿಯ ಅಧ್ಯಕ್ಷ ವೈ .ಅಬ್ದುಲ್ಲಾ ಕುಂಞಿ, ಉಪಾಧ್ಯಕ್ಷ ಯು.ಕೆ.ಮೋನು ಕಣಚೂರು, ಪ್ರಧಾನ ಕಾರ್ಯದರ್ಶಿ ಬಿ.ಎಂ. ಮುಮ್ತಾಝ್‌ಅಲಿ, ಟ್ರಸ್ಟಿಗಳಾದ ಪಿ.ಸಿ. ಹಾಶೀರ್, ಅಬೂ ಸುಫಿಯಾನ್ ಇಬ್ರಾಹೀಂ ಮದನಿ, ಜಿ.ಮುಹಮ್ಮದ್ ಹಾಗೂ ಶೇಖಬ್ಬ ಮುಸ್ಲಿಯಾರ್ ಖತೀಬ್ ಬದ್ರಿಯಾ ಮಸ್ಜಿದ್, ಇಬ್ರಾಹೀಂ ಬಾಖವಿ ಉಪಸ್ಥಿರಿದ್ದರು.
ತಖ್ವಾ ಜುಮಾ ಮಸೀದಿಯ ಮುತವಲ್ಲಿ ಹಾಗೂ ಕೋಶಾಧಿಕಾರಿ ಎಸ್.ಎಂ. ರಶೀದ್ ಹಾಜಿ ಸ್ವಾಗತಿಸಿದರು.
Next Story





