ಪಿ.ಎಚ್.ಡಿ ಪದವಿಗಳಿಸುವುದು ಕಾಲದ ಬೇಡಿಕೆಯಾಗಿದೆ, ಎಲ್ಲರೂ ಪದವಿ ಗಳಿಸುವವರಾಗಬೇಕು: ಡಾ.ಮುಹಮ್ಮದ್ ಮುಬೀನ್
ಎಸ್ ಐ ಒ ಉಳ್ಳಾಲ ಘಟಕದ ವತಿಯಿಂದ ಸನ್ಮಾನ

ಉಳ್ಳಾಲ, ಜು. 5: ಎಸ್ ಐ ಒ ಉಳ್ಳಾಲ ಘಟಕದ ವತಿಯಿಂದ ಕ್ಯಾನ್ಸರ್ ವಿಭಾಗದಲ್ಲಿ ಸಂಶೋಧನೆ ನಡೆಸಿ ಮಣಿಪಾಲ ವಿಶ್ವವಿಧ್ಯಾಲಯದಿಂದ ಪಿ ಎಚ್ ಡಿ ಪದವಿ ಗಳಿಸಿದ ಫಾರ್ಮಸ್ಸುಟಿಕಲ್ ವಿಭಾಗದ ಸಂಶೋಧಕ ಡಾ.ಮುಹಮ್ಮದ್ ಮುಬೀನ್ ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ಎಸ್ ಐ ಒ ಕಚೇರಿಯಲ್ಲಿ ಮಾಡಲಾಯಿತು.
ಮುಖ್ಯ ಅತಿಥಿಯಾಗಿ ಜಮಾಅತೇ ಇಸ್ಲಾಮಿ ಉಳ್ಳಾಲ ಘಟಕದ ಅಧ್ಯಕ್ಷ ಅಬ್ದುಲ್ ಕರೀಮ್ ಮತ್ತು ಉಪಾಧ್ಯಕ್ಷ ಅಬ್ದುಲ್ ರಹೀಂ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಎಸ್ ಐ ಒ ಉಳ್ಳಾಲ ಘಟಕದ ಅಧ್ಯಕ್ಷ ಅಶೀರುದ್ದೀನ್ ಸ್ವಾಗತಿಸಿದರು.
ಅಬ್ದುಲ್ ರಹೀಮ್ ಮಾತನಾಡಿ, ನಾಡಿನ ಸಾಮರಸ್ಯವನ್ನು ಉಳಿಸುವ ಭವಿಷ್ಯದ ಪ್ರಜೆಗಳಾಗಿ ವಿದ್ಯಾರ್ಥಿಗಳು ಬದಲಾಗಬೇಕು ಶಿಕ್ಷಣದೊಂದಿಗೆ ದೇವ ಭಯವಿರುವವರಾಗಬೇಕು ಎಂದರು.
ಸನ್ಮಾನ ಸ್ವೀಕರಿಸಿದ ನಂತರ ಮಾತನಾಡಿದ ಅವರು ವಿದ್ಯಾವಂತರಾಗಿ ಬೆಳೆಯಲು ಎಸ್ ಐ ಒ ಉತ್ತಮ ವೇದಿಕೆ ಪಿ ಎಚ್ ಡಿ ಪದವಿಗಳಿಸುವುದು ಕಾಲದ ಬೇಡಿಕೆಯಾಗಿದೆ ಎಲ್ಲರೂ ಪಿ ಎಚ್ ಡಿ ಪದವಿ ಗಳಿಸುವವರಾಗಬೇಕು. ಕಠಿಣ ಪರಿಶ್ರಮ ಮತ್ತು ತ್ಯಾಗ ಅತ್ಯಗತ್ಯ. ವಿಜ್ಞಾನ ಬೆಳೆಯುತ್ತಿದೆ ನಾವು ಬೆಳೆಯಬೇಕು ಎಂದರು.
ತೊಕ್ಕೊಟ್ಟು ಘಟಕದ ಅಧ್ಯಕ್ಷ ನಿಝಾಮ್ ಉಳ್ಳಾಲ, ಅನಿವಾಸಿ ಭಾರತೀಯ ಮುಶರಫ್ ಬಬ್ಬುಕಟ್ಟೆ, ಗುಲ್ಶನ್ ಸಂಚಾಲಕ ಮುಝಮ್ಮಿಲ್, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಹಿಲ್ ಕಿರಾಅತ್ ಪಠಿಸಿದರು, ವಾಸಿಫ್ ವಂದಿಸಿದರು.







