ಪಾಕ್: ಭಾರೀ ಮಳೆಗೆ 14 ಬಲಿ

ಇಸ್ಲಾಮಾಬಾದ್, ಜು. 5: ಪಾಕಿಸ್ತಾನದ ಪಂಜಾಬ್ ಮತ್ತು ಖೈಬರ್ ಪಖ್ತೂಂಖ್ವ ರಾಜ್ಯಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕನಿಷ್ಠ 14 ಮಂದಿ ಮೃತಪಟ್ಟಿದ್ದಾರೆ ಹಾಗೂ 19 ಮಂದಿ ಗಾಯಗೊಂಡಿದ್ದಾರೆ.
ಮಂಗಳವಾರ ಸುರಿಯಲು ಆರಂಭವಾದ ಜಡಿಮಳೆ ಗುರುವಾರವೂ ಮುಂದುವರಿದಿದೆ ಎಂದು ಹೇಳಿಕೆಯೊಂದರಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣೆ ಪ್ರಾಧಿಕಾರ (ಎನ್‌ಡಿಎಂಎ) ತಿಳಿಸಿದೆ.
ಮಳೆಯ ಪ್ರಕೋಪ ಪಂಜಾಬ್‌ನಲ್ಲಿ ತೀವ್ರವಾಗಿದ್ದು 12 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಖೈಬರ್ ಪಖ್ತೂನ್‌ಖ್ವದಲ್ಲಿ ಇಬ್ಬರು ಮೃತರಾಗಿದ್ದಾರೆ.
Next Story





