ಬಾಲಕಿಯ ಅತ್ಯಾಚಾರ ಪ್ರಕರಣಕ್ಕೆ ಖಂಡನೆ: ಕಾಂಗ್ರೆಸ್, ಎನ್‌ಎಸ್‌ಯುಐನಿಂದ ಪ್ರತಿಭಟನೆ

ಮಂಗಳೂರು, ಜು.5: ಮಧ್ಯಪ್ರದೇಶದಲ್ಲಿ ನಡೆದ ಬಾಲಕಿಯ ಅತ್ಯಾಚಾರ ಖಂಡಿಸಿ ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ಮತ್ತು ಎನ್‌ಎಸ್‌ಯುಐನಿಂದ ನಗರದ ಲಾಲ್‌ಬಾಗ್ ಸರ್ಕಲ್‌ನಲ್ಲಿ ಗುರುವಾರ ಸಂಜೆ ಮೇಣದಬತ್ತಿ ಹಿಡಿದು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಶಾಲೇಟ್ ಪಿಂಟೊ, ಎನ್‌ಎಸ್‌ಯುಐ ಅಧ್ಯಕ್ಷ ಅಬ್ದುಲಾ ಭೀನ್ನೂ, ಜಿಪಂ ಸದಸ್ಯರಾದ ಮಮತಾ ಘಟ್ಟಿ, ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ನೀರಜ್ ಪಾಲ್, ನಮಿತಾ, ರಹೀಮ್ಮನ್, ಸವಧ್, ಶಕುಂತಲ್, ಶಶಿಕಲಾ, ಆಶಾ ಡಿಸಿಲ್ವಾ ಮತ್ತಿತರರು ಪಾಲ್ಗೊಂಡಿದ್ದರು.
Next Story





