Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಮುಂಬೈಯನ್ನು ಉಳಿಸುವ ರೋಚಕ ಕಳ್ಳ-ಪೊಲೀಸ್...

ಮುಂಬೈಯನ್ನು ಉಳಿಸುವ ರೋಚಕ ಕಳ್ಳ-ಪೊಲೀಸ್ ಆಟ 'ಸೇಕ್ರೆಡ್ ಗೇಮ್ಸ್'

ನೆಟ್ ಫ್ಲಿಕ್ಸ್ ನ ಚೊಚ್ಚಲ ಭಾರತೀಯ ವೆಬ್ ಸೀರಿಸ್ ವಿಮರ್ಶೆ

ವಾರ್ತಾಭಾರತಿವಾರ್ತಾಭಾರತಿ7 July 2018 1:44 PM IST
share
ಮುಂಬೈಯನ್ನು ಉಳಿಸುವ ರೋಚಕ ಕಳ್ಳ-ಪೊಲೀಸ್ ಆಟ ಸೇಕ್ರೆಡ್ ಗೇಮ್ಸ್

ನೆಟ್ ಫ್ಲಿಕ್ಸ್ ನ ಚೊಚ್ಚಲ ಭಾರತೀಯ ವೆಬ್ ಸೀರಿಸ್ 'ಸೇಕ್ರೆಡ್ ಗೇಮ್ಸ್'ನ ಮೊದಲ ಕಂತು ಬಿಡುಗಡೆಯಾಗಿದೆ. ಗ್ಯಾಂಗ್ ಸ್ಟರ್ ಮತ್ತು ಪೊಲೀಸ್ ಅಧಿಕಾರಿಯ ನಡುವಿನ 'ಕಳ್ಳ-ಪೊಲೀಸ್' ಆಟದಲ್ಲಿ ಈ ಸೀರಿಸ್ ನ ರೋಚಕತೆ ಅಡಗಿದೆ.

ಇನ್ ಸ್ಪೆಕ್ಟರ್ ಸರ್ತಾಜ್ ಸಿಂಗ್ (ಸೈಫ್ ಅಲಿ ಖಾನ್) ಹಾಗು ಗಣೇಶ್ ಗಾಯತೊಂಡೆ (ನವಾಝುದ್ದೀನ್ ಸಿದ್ದಿಕಿ) ಈ ವೆಬ್ ಸೀರಿಸ್ ನ ಮುಖ್ಯ ಪಾತ್ರಗಳು.

ಇನ್‍ಸ್ಪೆಕ್ಟರ್ ಆಗಿರುವ ಸರ್ತಾಜ್ ಸಿಂಗ್ ಒಬ್ಬ ಪ್ರಾಮಾಣಿಕ ಅಧಿಕಾರಿ. ಹಲವು ಬಾರಿ ಹಣ, ಹೆಣ್ಣು ಮತ್ತು ಯಶಸ್ಸಿನ ತುಡಿತಕ್ಕೆ ಒಳಗಾಗಿದ್ದರೂ ಆತ ಎಂದೂ ಅದಕ್ಕೆ ಬಲಿಯಾಗುವುದಿಲ್ಲ. ಒಂದು ಹತ್ಯೆ ಪ್ರಕರಣವನ್ನು ಮುಚ್ಚಿಹಾಕಲು ಇಲಾಖೆ ಜತೆ ಸಹಕರಿಸದ ಕಾರಣಕ್ಕಾಗಿ ಸರ್ತಾಜ್ ಅಮಾನತುಗೊಳ್ಳುತ್ತಾನೆ. ನಂತರ ಅಪಾರ್ಟ್‍ಮೆಂಟ್‍ನಲ್ಲಿ ಏಕಾಂಗಿಯಾಗಿ ಜೀವನ ಕಳೆಯುತ್ತಾ ಇರುತ್ತಾನೆ.

ಅಂತಿಮವಾಗಿ ಹಲವು ವರ್ಷ ಹೆಣಗಾಟದ ಬಳಿಕವೂ ಎಸ್‍ಐ ಆಗಿಯೇ ಉಳಿಯುತ್ತಾನೆ. ಅದಕ್ಷ ಅಧಿಕಾರಿ ಎಂದು ಬಿಂಬಿಸಲ್ಪಡುತ್ತಾನೆ. ಆದರೆ ಅಂತಿಮವಾಗಿ ಆತನ ಫೋನ್ ರಿಂಗಣಿಸುತ್ತದೆ. ಫೋನ್ ನ ಇನ್ನೊಂದು ತುದಿಯಲ್ಲಿ ಜಿ-ಕಂಪನಿಯ ಬಾಸ್, 17 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಗ್ಯಾಂಗ್‍ಸ್ಟರ್, 150 ಕೊಲೆ ಪ್ರಕರಣಗಳ ಆರೋಪಿ, ಭೀತಿ ಹುಟ್ಟಿಸುವ ವ್ಯಕ್ತಿತ್ವ: ಗಣೇಶ್ ಗಾಯ್ತೊಂಡೆ.

ಗಾಯ್ತೊಂಡೆ. ತನ್ನದೇ ಕಥೆಯನ್ನು ಸರ್ತಾಜ್‍ಗೆ ಹೇಳುತ್ತಾನೆ. ಬಡ ಭಿಕ್ಷುಕನ ಮಗನಾಗಿ ಹುಟ್ಟಿದ ತಾನು ಮುಂಬೈನ ಕಸದ ಗುಡ್ಡೆಯಿಂದ ಸಾಮ್ರಾಜ್ಯ ಕಟ್ಟಲು ಹೇಗೆ ಸಾಧ್ಯವಾಯಿತು ಎಂಬ ಬಗ್ಗೆ ವಿವರಿಸುತ್ತಾನೆ. ಮುಂಬೈ 25 ದಿನಗಳಲ್ಲಿ ಪತನವಾಗುತ್ತದೆ ಎಂದು ಹೇಳುತ್ತಾನೆ. ಆನಂತರ ಕಳ್ಳ-ಪೊಲೀಸ್ ಆಟ ಶುರುವಾಗುತ್ತದೆ.

ನಿರ್ದೇಶನದ ಹೊಣೆಯನ್ನು ಅನುರಾಗ್ ಕಶ್ಯಪ್ ಹಾಗೂ ವಿಕ್ರಮಾದಿತ್ಯ ಮೋಟ್ವಾನೆ ಹಂಚಿಕೊಂಡಿದ್ದು, ಅದ್ಭುತ ಕಥಾಚಿತ್ರ ಸೃಷ್ಟಿಸಿದ್ದಾರೆ. ಕೇಂದ್ರ ಪಾತ್ರಗಳ ವರಸೆ, ನಗರದ ತಳಮಳ, ಭ್ರಷ್ಟಾಚಾರ ಮುಗಿಲು ಮುಟ್ಟಿರುವುದು ಹೀಗೆ ಪರಿಪೂರ್ಣ ಕಥೆ. ಇದೆಲ್ಲವನ್ನೂ ಮೀರಿಸುವಂಥ ಅದ್ಭುತ ನಟನೆ ನವಾಝುದ್ದೀನ್ ಸಿದ್ದಿಕಿಯಿಂದ ಮೂಡಿಬಂದಿದೆ.

ಗಣೇಶ್ ಗಾಯ್ತೊಂಡೆ. ಹಲವು ವರ್ಷಗಳವರೆಗೆ ನೆನಪಿನಲ್ಲಿ ಉಳಿಯುವಂಥ ಪಾತ್ರ. ಇದು ನವಾಝುದ್ದೀನ್  ಅಭಿನಯ ಕೌಶಲಕ್ಕೆ ಸಾಕ್ಷಿಯಾಗಿದೆ. ಸರ್ತಾಜ್ ಪಾತ್ರದಲ್ಲಿ ಸೈಫ್ ಅಲಿಖಾನ್ ಮಿಂಚಿದ್ದಾರೆ.

ಲೇಖಕರಾದ ಅರುಣ್ ಗ್ರೋವರ್, ಸ್ಮಿತಾ ಸಿಂಗ್ ಮತ್ತು ವಸಂತ್‍ನಾಥ್ ಅವರ ಅದ್ಭುತ ಕೆಲಸದ ಬಗ್ಗೆ ಹೇಳಲು ಪದಗಳೇ ಇಲ್ಲ. ರಸವತ್ತಾದ ಅಪರಾಧದ ಜತೆಗೆ ವಿಕ್ರಂ ಚಂದ್ರ ಅವರ ಅದ್ಭುತ ಕಾದಂಬರಿಯ ಉಪಶೀರ್ಷಿಕೆಯನ್ನು ಉಳಿಸಿಕೊಂಡಿದ್ದಾರೆ. ಅದಕ್ಕೆ ಒತ್ತು ನೀಡಿ, ಹೆಚ್ಚು ಪ್ರಸ್ತುತವಾಗಿಸಿದ್ದಾರೆ. ಗಾಯ್ತೊಂಡೆ ಮತ್ತು ಸರ್ತಾಜ್ ಆಟಗಳು ಅನಾವರಣಗೊಳ್ಳುತ್ತಿದ್ದಂತೆಯೇ, ಕೀಳುಮಟ್ಟದ ರಾಜಕೀಯ ಘಟನಾವಳಿಗಳನ್ನೊಳಗೊಂಡ ಸೇಕ್ರೆಡ್ ಗೇಮ್ಸ್‍ನ ಎರಡನೇ ಭಾಗದಲ್ಲಿ ಇಂದಿರಾಗಾಂಧಿ ಮತ್ತು ರಾಜೀವ್‍ಗಾಂಧಿ ನೇತೃತ್ವದ ಕಾಂಗ್ರೆಸ್ ಆಡಳಿತ ಮತ್ತು ಪ್ರಸ್ತುತ ಆಡಳಿತ, ಕೋಮುವಾದವನ್ನು ಸಮೀಕರಿಸಿ ಟೀಕಿಸಲಾಗಿದೆ.

ನೆಟ್ ಫ್ಲಿಕ್ಸ್ ನ ಚೊಚ್ಚಲ ಭಾರತೀಯ ವೆಬ್ ಸೀರಿಸ್ ಆದ 'ಸೇಕ್ರೆಡ್ ಗೇಮ್ಸ್' ವೀಕ್ಷಕನನ್ನು ಸೀಟಿನ ಅಂಚಿಗೆ ತಂದು ಕೂರಿಸುವ ಅದ್ಭುತ ಥ್ರಿಲ್ಲರ್ ಎಂದರೆ ತಪ್ಪಾಗಲಾರದು.

ತಾರಾಗಣ: ಸೈಫ್ ಅಲಿ ಖಾನ್, ನವಾಜುದ್ದೀನ್ ಸಿದ್ದಿಕಿ, ರಾಧಿಕಾ ಆಪ್ಟೆ, ನೀರಜ್ ಕಬಿ, ಆಮೀರ್ ಬಶೀರ್, ಪಂಕಜ್ ತ್ರಿಪಾಠಿ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X