ಚಿಕ್ಕಮಗಳೂರು: ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಣೆ
ಚಿಕ್ಕಮಗಳೂರು, ಜು.8: ಶಾಸಕರ ನಿಧಿಯಿಂದ 68 ಮಂದಿ ಅಂಗವಿಕಲರಿಗೆ ತ್ರಿಚಕ್ರ ವಾಹನಗಳನ್ನು ಚಿಕ್ಕಮಗಳೂರಿನ ತಾಲೂಕು ಕಚೇರಿ ಆವರಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಶಾಸಕ ಸಿ.ಟಿ.ರವಿ ವಿತರಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್, ಜಿ.ಪಂ.ಸ್ಥಾಯಿ ಸಮಿತಿ ಸದಸ್ಯೆ ಜಸಂತಾ ಅನಿಲ್ ಕುಮಾರ್, ಸದಸ್ಯರಾದ ಬೆಳವಾಡಿ ರವೀಂದ್ರ, ಬೀಕನಹಳ್ಳಿ ಸೋಮಶೇಕರ್, ವಿಜಯ್ಕುಮಾರ್, ತಾಪಂ ಅಧ್ಯಕ್ಷ ಜಯ್ಯಣ್ಣ ಇತರರು ಉಪಸ್ಥಿತರಿದ್ದರು.
Next Story