ಕೆಮ್ಮಣ್ಣು: ಜನಪ್ರತಿನಿಧಿಗಳೊಂದಿಗೆ ಈದ್ ಸ್ನೇಹಮಿಲನ

ಉಡುಪಿ, ಜು.8: ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಜನಪ್ರತಿನಿಧಿ ಗಳೊಂದಿಗೆ ಈದ್ ಸ್ನೇಹ ಮಿಲನ ಕಾರ್ಯಕ್ರಮವನ್ನು ಇತ್ತೀಚೆಗೆ ಕೆಮ್ಮಣ್ಣಿನ ಗ್ರಾಪಂ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಸದ್ಭಾವನ ವೇದಿಕೆಯ ರಾಜ್ಯ ಕಾರ್ಯದರ್ಶಿ ಅಕ್ಬರ್ ಅಲಿ ಮಾತನಾಡಿದರು. ಈ ಸಂದರ್ಭದಲ್ಲಿ ಪಡುತೋನ್ಸೆ ಗ್ರಾಪಂ ಅಧ್ಯಕ್ಷೆ ಫೌಝಿಯಾ ಸಾದಿಕ್, ಮಾಜಿ ತಾಪಂ ಉಪಾಧ್ಯಕ್ಷೆ ವೆರೋನಿಕಾ ಕರ್ನೇ ಲಿಯೋ, ಜಿಪಂ ಸದಸ್ಯ ತೋನ್ಸೆ ಜನಾರ್ದನ ಪೂಜಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕಮಲ, ರಘುರಾಮ್ ಶೆಟ್ಟಿ ಶುಭ ಹಾರೈಸಿದರು.
ಜಮಾಅತೆ ಇಸ್ಲಾಮಿ ಹಿಂದ್ನ ಸ್ಥಳೀಯ ಅಧ್ಯಕ್ಷ ಅಬ್ದುಲ್ ಕಾದೀರ್ ಮೊಯ್ದಿನ್ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಇದ್ರಿಸ್ ಹೂಡೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
Next Story





