Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಪಿಎನ್‌ಬಿ: ಉದ್ದೇಶಪೂರ್ವಕ ಸುಸ್ತಿದಾರರ...

ಪಿಎನ್‌ಬಿ: ಉದ್ದೇಶಪೂರ್ವಕ ಸುಸ್ತಿದಾರರ ಬಾಕಿ ಪ್ರಮಾಣ ಕುಸಿತ

ವಾರ್ತಾಭಾರತಿವಾರ್ತಾಭಾರತಿ8 July 2018 8:29 PM IST
share
ಪಿಎನ್‌ಬಿ: ಉದ್ದೇಶಪೂರ್ವಕ ಸುಸ್ತಿದಾರರ ಬಾಕಿ ಪ್ರಮಾಣ ಕುಸಿತ

ಹೊಸದಿಲ್ಲಿ, ಜು.8: ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್‌ಬಿ)ಗೆ ದೊಡ್ಡ ಉದ್ದೇಶಿತ ಸುಸ್ತಿದಾರರಿಂದ ಬರಬೇಕಾಗಿರುವ ಸಾಲ ಜೂನ್ 30ರ ಅಂಕಿಅಂಶದಂತೆ 15,354.52 ಕೋಟಿ ರೂ. ಆಗಿದ್ದು, ಕಳೆದ ತಿಂಗಳಿಗೆ ಹೋಲಿಸಿದರೆ ಇದು ಶೇ.0.87ರಷ್ಟು ಕಡಿಮೆಯಾಗಿದೆ. ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌ಗಳಿಂದ 25 ಲಕ್ಷ ರೂ. ಅಥವಾ ಹೆಚ್ಚು ಸಾಲ ಪಡೆಯುವರು ದೊಡ್ಡ ಸಾಲಗಾರರ ಪಟ್ಟಿಗೆ ಸೇರುತ್ತಾರೆ. ಈ ಸಾಲಗಾರರು 2018ರ ಮೇ ತಿಂಗಳಾಂತ್ಯಕ್ಕೆ ಪಿಎನ್‌ಬಿ ಬ್ಯಾಂಕ್‌ಗೆ ಬಾಕಿ ಇರಿಸಿಕೊಂಡಿದ್ದ ಮೊತ್ತ 15,490 ಕೋಟಿ ರೂ. ಆಗಿತ್ತು. ಅಲ್ಲದೆ, 2018ರ ಮಾರ್ಚ್ 31ರ ಲೆಕ್ಕಪತ್ರದ ಪ್ರಕಾರ ಉದ್ದೇಶಪೂರ್ವಕ ಸುಸ್ತಿದಾರರಿಂದ ಬರಬೇಕಿರುವ ಬಾಕಿಯ ಮೊತ್ತ 15,171.91 ಕೋಟಿ ರೂ. ಆಗಿತ್ತು.

ದೊಡ್ಡ ಪ್ರಮಾಣದ ಉದ್ದೇಶಿತ ಸುಸ್ತಿದಾರರಲ್ಲಿ ಕುಡೋಸ್ ಕೆಮೀ ಲಿ. ಸಂಸ್ಥೆ(1,301.82 ಕೋಟಿ ರೂ.), ಕಿಂಗ್‌ಫಿಷರ್ ಏರ್‌ಲೈನ್ಸ್(597.44 ಕೋಟಿ ರೂ), ಜಾಸ್ ಇನ್‌ಫ್ರಾಸ್ಟ್ರಕ್ಚರ್ (410.96 ಕೋಟಿ ರೂ), ವಿಎಂಸಿ ಸಿಸ್ಟಮ್ಸ್ (296.08 ಕೋಟಿ ರೂ), ಎಂಬಿಎಸ್ ಜ್ಯುವೆಲ್ಲರ್ಸ್ (266.17 ಕೋಟಿ ರೂ), ತುಲ್‌ಸಿ ಎಕ್ಸ್‌ಟ್ರೂಷನ್(175.41 ಕೋಟಿ ರೂ) ಮತ್ತು ಅರವಿಂದ್ ರೆಮೆಡೀಸ್(158.16 ಕೋಟಿ ರೂ. ) ಸೇರಿದೆ. ಈ ಪಟ್ಟಿಯಲ್ಲಿ ಐಸಿಎಸ್‌ಎ ಇಂಡಿಯಾ ಲಿ.(134.76 ಕೋಟಿ ರೂ.), ಭವಾನಿ ಇಂಡಸ್ಟ್ರೀಸ್ (106.66 ಕೋ.ರೂ)ಇಂದು ಪ್ರೊಜೆಕ್ಟ್ಸ್ (102.83 ಕೋ.ರೂ), ಬಿಬಿಎಫ್ ಇಂಡಸ್ಟ್ರೀಸ್ (101 ಕೋ.ರೂ). ಸೇರಿದೆ. ಈ ಸಾಲಗಾರರು ವಿವಿಧ ಬ್ಯಾಂಕ್‌ಗಳ ಒಕ್ಕೂಟ ವ್ಯವಸ್ಥೆಯಡಿ ಪಿಎನ್‌ಬಿಯಿಂದ ಸಾಲ ಪಡೆದಿದ್ದಾರೆ. ಪಿಎನ್‌ಬಿ ಬ್ಯಾಂಕ್‌ನಿಂದಲೇ ಸಾಲ ಪಡೆದವರಲ್ಲಿ ವಿನ್ಸಮ್ ಡೈಮಂಡ್ಸ್ ಆ್ಯಂಡ್ ಜ್ಯುವೆಲ್ಲರಿ 899.70 ಕೋ.ರೂ, ಫಾರ್‌ಎವರ್ ಪ್ರೆಷಿಯಸ್ ಜ್ಯುವೆಲ್ಲರಿ ಆ್ಯಂಡ್ ಡೈಮಂಡ್ಸ್ 747.97 ಕೋ. ರೂ, ಝೂಮ್ ಡೆವಲಪರ್ಸ್ 410.18 ಕೋ.ರೂ, ಆ್ಯಪಲ್ ಇಂಡಸ್ಟ್ರೀಸ್ 248.34 ಕೋ.ರೂ., ಮಹುವ ಮೀಡಿಯಾ ಪ್ರೈ.ಲಿ(104.86 ಕೋ.ರೂ, ಶ್ರೀ ಸಿಧ್‌ಬಾಲಿ ಇಸ್‌ಪಾಟ್ 165.98 ಕೋ.ರೂ.  ಸೇರಿದ್ದಾರೆ ಎಂದು ಬ್ಯಾಂಕ್‌ನ ಮೂಲಗಳು ತಿಳಿಸಿವೆ. ಇತರರ ಪೈಕಿ ರೂಪಾನಾ ಪೇಪರ್ಸ್‌ 100.49 ಕೋ.ರೂ, ಸೂರ್ಯ ವಿನಾಯಕ್ ಇಂಡಸ್ಟ್ರೀಸ್ 133.96 ಕೋ.ರೂ, ವಿಶಾಲ್ ಎಕ್ಸ್‌ಪೋರ್ಟ್ಸ್ ಓವರ್‌ಸೀಸ್ 98.39 ಕೋ.ರೂ, ರಾಮ್‌ಸರೂಪ್ ನಿರ್ಮಾಣ ವೈಯರ್ಸ್ 148.10 ಕೋ.ರೂ, ರಾಮ್‌ಸರೂಪ್ ಲೋಹ್ ಉದ್ಯೋಗ್ 124.34 ಕೋ.ರೂ, ರಾಣಾ ಅಲಾಯ್ಸೋ 78.90 ಕೋ.ರೂ. ಸೇರಿವೆ. ಬ್ಯಾಂಕಿಂಗ್ ವಲಯದಲ್ಲಿ, ಅದರಲ್ಲೂ ಮುಖ್ಯವಾಗಿ ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌ಗಳಲ್ಲಿ ಅನುತ್ಪಾದಕ ಆಸ್ತಿ(ಎನ್‌ಪಿಎ)ಯ ಅಥವಾ ಕೆಟ್ಟ ಸಾಲಗಳ ಮೊತ್ತ ವಿಪರೀತವಾಗಿ ಏರಿಕೆಯಾಗುತ್ತಿದ್ದು ಇದಕ್ಕೆ ಹಗರಣ ಅಥವಾ ವಂಚನೆಗಳೂ ಕಾರಣವಾಗಿದೆ. 2017ರ ಡಿಸೆಂಬರ್ ಅಂಕಿಅಂಶದ ಪ್ರಕಾರ ಬ್ಯಾಂಕಿಂಗ್ ವಲಯದಲ್ಲಿ ಎನ್‌ಪಿಎಯ ಮೊತ್ತ 8.31 ಲಕ್ಷ ಕೋಟಿ ಆಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ತೊಡೆದುಹಾಕಿದ (ರೈಟ್‌ಆಫ್) ಕೆಟ್ಟ ಸಾಲಗಳ ಮೊತ್ತ 1.20 ಲಕ್ಷ ಕೋಟಿ ರೂ.ಗೂ ಅಧಿಕವಾಗಿದೆ. ಇದರಲ್ಲಿ ಎಸ್‌ಬಿಐ ಬ್ಯಾಂಕ್‌ನ ಪ್ರಮಾಣ ಶೇ.25ರಷ್ಟು (40,196 ಕೋಟಿ ರೂ.) ಆಗಿದೆ. ಬಳಿಕದ ಸ್ಥಾನದಲ್ಲಿ ಕೆನರಾ ಬ್ಯಾಂಕ್(8,310 ಕೋಟಿ ರೂ), ಪಿಎನ್‌ಬಿ(7,407 ಕೋ.ರೂ), ಬ್ಯಾಂಕ್ ಆಫ್ ಬರೋಡ(4,948 ಕೋ.ರೂ). ಹಗರಣ ಬಾಧಿತ ಪಿಎನ್‌ಬಿ ಬ್ಯಾಂಕ್‌ನ ಒಟ್ಟು ಸಾಲದ ಪ್ರಮಾಣ ಒಟ್ಟು ಮುಂಗಡದ ಶೇ.18.38ಕ್ಕೇರಿದ್ದು ಕಳೆದ ವರ್ಷ ಈ ಪ್ರಮಾಣ ಶೇ.12.53ರಷ್ಟಿತ್ತು. ಅಲ್ಲದೆ ಕಳೆದ ವರ್ಷ ಶೇ.7.81ರಷ್ಟಿದ್ದ ನಿವ್ವಳ ಎನ್‌ಪಿಎ ಈ ವರ್ಷ ಶೇ.11.24ಕ್ಕೇರಿದೆ. ಮಾರ್ಚ್ 2017ರಲ್ಲಿ ಪಿಎನ್‌ಬಿ ಬ್ಯಾಂಕ್‌ನ ನಿವ್ವಳ ಎನ್‌ಪಿಎ 32,702 ಕೋ.ರೂ. ಆಗಿದ್ದರೆ ಮಾರ್ಚ್ 2018ರಲ್ಲಿ ಈ ಮೊತ್ತ 48,684.29 ಕೋ.ರೂ.ಗೆ ಹೆಚ್ಚಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X