ಯುಎಇಯಲ್ಲಿ ಹಲವೆಡೆ ಮಳೆ, ಕಡಿಮೆಯಾಗದ ತಾಪಮಾನ

ಅಬು ದಾಬಿ, ಜು.8: ಯುಎಇಯ ಹಲವು ಭಾಗಗಳಲ್ಲಿ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದ್ದು, ದುಬೈ ಮತ್ತು ಶಾರ್ಜಾದಲ್ಲಿ ಮೋಡ ಕವಿದ ವಾತಾವರಣ ಮುಂದುವರಿದಿದೆ.
ನದ್ ಅಲ್ ಶೆಬ ಹಾಗೂ ಇತರ ಹಲವು ಕಡೆಗಳಲ್ಲಿ ಮರಳು ಬಿರುಗಾಳಿಯಿಂದಾಗಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಬು ಧಾಬಿ ನಗರದಲ್ಲಿ ತಾಪಮಾನವು ಇನ್ನೂ ಏರುಗತಿಯಲ್ಲೇ ಇದ್ದು, ಮಳೆಯಿಂದ ಯಾವುದೇ ಬದಲಾವಣೆಗಳು ಆಗಿಲ್ಲ. ಶನಿವಾರ ಸಂಜೆ ಅಲ್ ಹಿಲಿ, ಅಲ್ ಫೊಹ್ ಹಾಗೂ ಅಲ್ ಶುವೈಬ್ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋಮವಾರ ಮತ್ತು ಮಂಗಳವಾರ ಉಷ್ಣಾಂಶದಲ್ಲಿ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ತಿಳಿಸಿರುವ ಅಧಿಕಾರಿಗಳು ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿದ್ದು, ಮಂಗಳವಾರ ದಟ್ಟ ಹೊಗೆಮೋಡ ಇಡೀ ಪ್ರದೇಶವನ್ನು ಮುಚ್ಚಲಿದ್ದು ಧೂಳು ಬಿರುಗಾಳಿ ಬೀಸುವ ಸಾಧ್ಯತೆಯೂ ಇದೆ ಎಂದು ಎಚ್ಚರಿಸಿದೆ.
Next Story





