ಮಡಿಕೇರಿ: ಬೈಕ್‍ಗೆ ಲಾರಿ ಢಿಕ್ಕಿ; ಸವಾರ ಮೃತ್ಯು
ಮಡಿಕೇರಿ, ಜು.8: ಬೈಕ್‍ವೊಂದಕ್ಕೆ ಲಾರಿ ಢಿಕ್ಕಿಯಾದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ತಿತಿಮತಿಯ ಮಜ್ಜಿಗೆಹಳ್ಳದಲ್ಲಿ ನಡೆದಿದೆ.
ವಿರಾಜಪೇಟೆ ಈಚೂರು ಗ್ರಾಮದ ನಿವಾಸಿ ಕಿರಣ್ ಕುಮಾರ್ ಹಾಗೂ ಪುರುಷ ಎಂಬವರು ಬೈಕ್‍ನಲ್ಲಿ ತೆರಳುತ್ತಿದ್ದಾಗ ಈ ಘಟನೆ ನಡೆದಿದ್ದು, ಸವಾರ ಪುರುಷ ಮೃತಪಟ್ಟಿದ್ದಾರೆ. ತಿತಿಮತಿ ಆನೆಚೌಕೂರು ಮಾರ್ಗವಾಗಿ ಗೋಣಿಕೊಪ್ಪದ ಕಡೆಗೆ ಬೈಕ್‍ನಲ್ಲಿ ಬರುತ್ತಿದ್ದಾಗ ಘಟನೆ ನಡೆದು ಬೈಕ್ ಸವಾರ ಪುರುಷ ಹಾಗೂ ಹಿಂಬದಿ ಸವಾರ ಕಿರಣ್ ಕುಮಾರ್ ಗಾಯಗೊಂಡಿದ್ದರು. ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಪುರುಷ ಮೃತಪಟ್ಟಿದ್ದು, ಈ ಸಂಬಂಧ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story