ಎಫ್‌ಸಿ ಇಂಡಿಯ ಪ್ರತಿಷ್ಠಾನದಿಂದ ಇಬ್ಬರು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ: ಮೂಸಾ ಫಾಝಿಲ್

ಮಂಗಳೂರು, ಜು.8: ಎಫ್‌ಸಿ ಪ್ರತಿಷ್ಠಾನ (ಫಝಿಲ್ಸ್ ಕ್ರಿಯೇಶನ್ಸ್ ಆ್ಯಂಡ್ ಎಫ್‌ಸಿ ಕ್ರಾಫ್ಟ್.ಇನ್ ಅಂಗ ಸಂಸ್ಥೆ) ಮೂಸಾ ಫಾಝಿಲ್ ಅಧ್ಯಕ್ಷತೆಯ ಲಾಭರಹಿತ ಸಂಸ್ಥೆಯಾಗಿದ್ದು ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿದೆ. ಜೊತೆಯಾಗಿ ನಾವು ಬದಲಾವಣೆ ಮಾಡಬಹುದು ಎಂಬ ಘೋಷ ವಾಕ್ಯದಡಿ ಕಾರ್ಯಾಚರಿಸುವ ಸಂಸ್ಥೆಯು ಮುಖ್ಯ ಚಟುವಟಿಕೆಗಳಲ್ಲಿ ಉಚಿತ ಶಿಕ್ಷಣ, ಉಚಿತ ನೋಟ್ ಪುಸ್ತಕ, ಹಸಿದವರಿಗೆ ಅನ್ನ ನೀಡುವುದು ಸೇರಿವೆ. ತಮ್ಮ ಸಾಮಾಜಿಕ ಕಾರ್ಯದ ಭಾಗವಾಗಿ ಎಫ್‌ಸಿ ಇಂಡಿಯ, ವಿದ್ಯಾ ಎಜ್ಯುಕೇಶನ್ ಜೊತೆಗೂಡಿ ಇಬ್ಬರು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲು ಮುಂದಾಗಿದೆ.
ಯುವ ಉದ್ಯಮಿ ಮುಹಮ್ಮದ್ ಕಬೀರ್ ನೇತೃತ್ವದ ವಿದ್ಯಾ ಎಜ್ಯುಕೇಶನ್ ಎಲ್ಲರಿಗೂ ಶಿಕ್ಷಣ ಎಂಬ ಧ್ಯೇಯನ್ನು ಹೊಂದಿದೆ. ಈ ಎರಡು ಸಂಸ್ಥೆಗಳು ಸೇರಿ ಶಿಕ್ಷಣ ಕ್ಷೇತ್ರದಲ್ಲಿ ಚಮತ್ಕಾರವನ್ನು ಮಾಡಲು ಮುಂದಾಗಿವೆ. ಅತ್ಯಂತ ಬಡಕುಟುಂಬದ ಇಬ್ಬರು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನೀಡಲು ಈ ಸಂಸ್ಥೆಗಳು ನಿರ್ಧರಿಸಿವೆ.
ಆಸಕ್ತ ವಿದ್ಯಾರ್ಥಿಗಳು ವಿದ್ಯಾ ಎಜ್ಯುಕೇಶನ್‌ನ ಮಂಗಳೂರಿನಲ್ಲಿರುವ ಕಚೇರಿಯನ್ನು ಸಂಪರ್ಕಿಸಬಹುದು ಅಥವಾ 8970735809, ಎಫ್‌ಸಿ ಇಂಡಿಯ ಪ್ರತಿಷ್ಠಾನ 9008676902ಗೆ ಕರೆ ಮಾಡಬಹುದು.







