ವನ್ಯ ಪ್ರಾಣಿ ಹಾವಳಿಯಿಂದಾದ ಬೆಳೆ ಹಾನಿಗೆ 13 ಕೋಟಿ ರೂ.ಪರಿಹಾರ: ಸಚಿವ ಆರ್. ಶಂಕರ್

ಬೆಂಗಳೂರು, ಜು. 10: ಮೂರು ವರ್ಷಗಳಲ್ಲಿ ವನ್ಯ ಪ್ರಾಣಿಗಳ ಹಾವಳಿಯಿಂದಾದ ಬೆಳೆ ಹಾನಿ ಪ್ರಕರಣಗಳಿಗೆ ರಾಜ್ಯದಲ್ಲಿ 13.70 ಕೋಟಿ ರೂ.ಪರಿಹಾರ ನೀಡಲಾಗಿದೆ ಎಂದು ಅರಣ್ಯ ಮತ್ತು ಜೀವಿಶಾಸ್ತ್ರ ಸಚಿವ ಆರ್. ಶಂಕರ್ ತಿಳಿಸಿದ್ದಾರೆ.
ಸೋಮವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಶಾಸಕ ಕೆ.ಎಸ್. ಈಶ್ವರಪ್ಪ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ ವರ್ಷ ಅರಣ್ಯದಲ್ಲಿ 925 ಬೆಂಕಿ ಬಿದ್ದ ಪ್ರಕರಣಗಳು ಸಂಭವಿಸಿದ್ದು, 6,976 ಹೆಕ್ಟೇರ್ ಅರಣ್ಯ ಪ್ರದೇಶಕ್ಕೆ ಹಾನಿಯಾಗಿದೆ. ಅರಣ್ಯಕ್ಕೆ ಬೆಂಕಿ ಬೀಳುವುದನ್ನು ತಪ್ಪಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಉದ್ದೇಶ ಪೂರ್ವಕವಾಗಿ ಕಾಡಿಗೆ ಬೆಂಕಿ ಇಡುವ ದುಷ್ಕರ್ಮಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಈಗಾಗಲೇ ದುಷ್ಕರ್ಮಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿ, ಪೊಲೀಸ್ ಠಾಣೆಯಲ್ಲಿಯೂ ಮೊಕದ್ದಮೆ ದಾಖಲು ಮಾಡಲಾಗುವುದು ಎಂದು ಹೇಳಿದರು.
15ನೆ ಮೊದಲ ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಮೊದಲ ಪ್ರಶ್ನೆ ಕುರುಬ ಸಮುದಾಯದ ಕೆ.ಎಸ್.ಈಶ್ವರಪ್ಪ ಕೇಳುತ್ತಿದ್ದು, ಆ ಪ್ರಶ್ನೆಗೆ ಉತ್ತರವನ್ನು ಕೂಡ ಅದೇ ಸಮುದಾಯಕ್ಕೆ ಸೇರಿದ ಸಚಿವ ಶಂಕರ್ ಉತ್ತರ ನೀಡುತ್ತಿದ್ದು, ಇದು ಸದನಕ್ಕೆ ಶುಭ ಸೂಚನೆ ಎಂದು ಸದಸ್ಯರೊಬ್ಬರು ಹಾಸ್ಯಚಟಾಕಿ ಹಾರಿಸಿದ ಪ್ರಸಂಗವೂ ನಡೆಯಿತು’







