ಕುತ್ತಾರಿನಲ್ಲಿ ಮುಂಗಾರು ಸಂಭ್ರಮ

ಮಂಗಳೂರು, ಜು.9: ಬಡವರಾಗಿ ಹುಟ್ಟುವುದು ಅಪರಾಧವಲ್ಲ, ಆದರೆ ಬಡವರಾಗಿ ಬದುಕು ಸಾಗಿಸುವುದು ಅಪರಾಧ. ವಿದ್ಯೆಗೆ ಜಾತಿ ಧರ್ಮದ ಪರಿಧಿ ಇರಲು ಸಾಧ್ಯವಿಲ್ಲ ಎಂದು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಹೇಳಿದರು.
ರಾಷ್ಟ್ರೀಯ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಇದರ ವತಿಯಿಂದ ಕುತ್ತಾರಿನ ಬಾಲ ಸಂರಕ್ಷಣಾ ಕೇಂದ್ರದಲ್ಲಿ ರವಿವಾರ ಆಯೋಜಿಸಿದ್ದ ‘ಮುಂಗಾರು ಸಂಭ್ರಮ’ ಮಳೆ ಖುಷಿಗೆ ಹಾಡಿನ ಸಿಂಚನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಷ್ಠಾನದ ಅಧ್ಯಕ್ಷ ಗಂಗಾಧರ್ ಅಧ್ಯಕ್ಷತೆ ವಹಿಸಿದ್ದರು. ಬಾಲ ಸಂರಕ್ಷಣಾ ಕೇಂದ್ರದ ಸಂಚಾಲಕ ಡಾ. ಅನಂತಕೃಷ್ಣ ಭಟ್, ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಅಬ್ಬಾಸ್ ಕಿನ್ಯ, ಸಾಮಾಜಿಕ ಕಾರ್ಯಕರ್ತೆ ಯೋಗೀಶ್ವರಿ ಉಪಸ್ಥಿತರಿದ್ದರು.
ಸಿದ್ದಕಟ್ಟೆ ಮಲ್ಲಿಕಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
Next Story





