ತ್ಯಾಜ್ಯ ಗುಂಡಿಗೆ ಇಳಿದ ಮೂವರ ಸಾವು
ಸಾಂದರ್ಭಿಕ ಚಿತ್ರ
ಗಾಝಿಯಾಬಾದ್, ಜು. 9: ಗಾಝಿಯಾಬಾದ್ನ ಲೋನಿ ಪ್ರದೇಶದಲ್ಲಿರುವ ತ್ಯಾಜ್ಯ ಪಂಪಿಂಗ್ ಸ್ಟೇಶನ್ನ ಗುಂಡಿಗೆ ರವಿವಾರ ಇಳಿದ ಮೂವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುಂಡಿಯ ಒಳಗೆ ತುಂಬಿದ್ದ ತ್ಯಾಜ್ಯ ತೆಗೆಯಲು ಖಾಸಗಿ ಗುತ್ತಿಗೆ ಸಂಸ್ಥೆಯ ಕಾರ್ಮಿಕ ರೋಷನ್ ಲಾಲ್ (40) ಸುಮಾರು ಬೆಳಗ್ಗೆ 9.50ಕ್ಕೆ ಇಳಿದಿದ್ದರು. ಅವರು ಅಲ್ಲಿ ವಿಷಾನಿಲ ಸೇವಿಸಿ ಪ್ರಜ್ಞೆ ಕಳೆದುಕೊಂಡು ಮುಳುಗಿ ಮೃತಪಟ್ಟರು ಎಂದು ಅವರು ತಿಳಿಸಿದ್ದಾರೆ. 10 ನಿಮಿಷಗಳ ಬಳಿಕವೂ ಲಾಲ್ ಮೇಲೆ ಬರದೇ ಇದ್ದಾಗ, ಪರಿಶೀಲನೆ ನಡೆಸಲು ಮಹೇಶ್ (35) ಅವರು ಗುಂಡಿಗೆ ಇಳಿದರು. ಅವರು ಪ್ರಜ್ಞೆ ಕಳೆದುಕೊಂಡು ಮುಳುಗಿ ಮೃತಪಟ್ಟರು. ಲಾಲ್ ಹಾಗೂ ಮಹೇಶ್ ಇಬ್ಬರು ಖಾಸಗಿ ಸಂಸ್ಥೆಯ ಕಾರ್ಮಿಕರು. ಈ ಇಬ್ಬರನ್ನು ರಕ್ಷಿಸಲು ಬುಲ್ಬುಲ್ (26) ಅವರು ಇಳಿದರು. ಆದರೆ, ಅವರು ಕೂಡ ಉಸಿರುಗಟ್ಟಿ ಮುಳುಗಿ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.
Next Story