ವಾಸುದೇವ ರಾವ್‌ರ ಮೂರು ಕೃತಿಗಳ ಬಿಡುಗಡೆಗೆ

ಉಡುಪಿ, ಜು.9: ಉಡುಪಿ ರಂಗಭೂಮಿ, ತಲ್ಲೂರು ಫ್ಯಾಮಿಲಿ ಟ್ರಸ್ಟ್, ಬಾಲಕಿಯರ ಸರ ಕಾರಿ ಪದವಿ ಪೂರ್ವ ಕಾಲೆಜು, ಕ್ರಿಶ್ಚಿಯನ್ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ಸಾಹಿತಿ ಪಿ.ವಾಸುದೇವ ರಾವ್ ಅವರ ಕೃತಿ ಬಿಡುಗಡೆ ಹಾಗೂ ಅಭಿನಂದನಾ ಸಮಾರಂಭವು ರವಿವಾರ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಜರಗಿತು.
ಪಿ.ವಾಸುದೇವ ರಾವ್ ಅವರ ಬರಹ ತರಹ, ಪರಂಪರಾಗತ, ಭಗವದ್ಗೀತಾ ಕೃತಿಗಳನ್ನು ಬಿಡುಗಡೆಗೊಳಿಸಿದ ನಾಟಕಕಾರ ಡಾ.ಜಯಪ್ರಕಾಶ ಮಾವಿನಕುಳಿ ಮಾತನಾಡಿ, ಇಂದು ನಮ್ಮಲ್ಲಿ ಇತಿಹಾಸದ ಬಗ್ಗೆ ಪ್ರಜ್ಞೆ ಇಲ್ಲ. ಪ್ರತಿ ತಿಂಗಳಿ ಗೊಮ್ಮೆ ನಾವು ಆಚರಿಸುವ ಹಬ್ಬಗಳ ಮಾಹಿತಿ ಮಕ್ಕಳಿಗೆ ಇರುವುದಿಲ್ಲ. ಯಾವುದೇ ಒಂದು ಹಬ್ಬವನ್ನು ಆಚರಿಸುವ ಮೊದಲು ಆದರ ಅರ್ಥ ಹಾಗೂ ಆಚರಣೆ ಉದ್ದೇಶ ತಿಳಿದುಕೊಳ್ಳಬೇಕು ಎಂದರು.
ವಿದ್ವಾಂಸ ರಾಘವ ನಂಬಿಯಾರ್, ತುಳುಕೂಟದ ಅಧ್ಯಕ್ಷ ಜಯಕರ್ ಶೆಟ್ಟಿ ಇಂದ್ರಾಳಿ, ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯ ಬಾಸುಮ ಕೊಡುಗು, ಸಂಸ್ಥೆಯ ಗೌರವಾಧ್ಯಕ್ಷ ಡಾ.ಎಚ್.ಶಾಂತರಾಮ್, ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ ಉಪಸ್ಥಿತರಿದ್ದರು.
ರಂಗಭೂಮಿ ಉಪಾಧ್ಯಕ್ಷ ನಂದಕುಮಾರ್ ಸ್ವಾಗತಿಸಿದರು. ಜೊತೆಕಾರ್ಯ ದರ್ಶಿ ರವಿರಾಜ್ ಕಾರ್ಯಕ್ರಮ ನಿರೂಪಿಸಿದರು.





