ಉಪ್ಪಳದಲ್ಲಿ ಭೀಕರ ಅಪಘಾತ: ಸಚಿವ ಖಾದರ್ ಸಂತಾಪ

ಮಂಗಳೂರು, ಜು. 9: ಉಪ್ಪಳದಲ್ಲಿ ಸೋಮವಾರ ಮುಂಜಾನೆ ನಡೆದ ಭೀಕರ ಅಪಘಾತದ ಸುದ್ದಿ ತುಂಬಾ ನೋವು ತಂದಿದೆ. ಇಂತಹ ಹೃದಯ ವಿದ್ರಾವಕ ಘಟನೆ ನಡೆಯಬಾರದಿತ್ತು. ಆದರೆ ದೇವರ ವಿಧಿಯೇ ಬೇರೆ ಎಂದು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಭೀಕರ ಅಪಘಾತದಲ್ಲಿ ಕೆಸಿರೋಡ್ ಸಾಮಣಿಗೆ ಪ್ರದೇಶದ ಐವರು ಮೃತಪಟ್ಟಿದ್ದು ತುಂಬಲಾರದ ದುಃಖ ತಂದಿದೆ. ಮೃತರ ಕುಟುಂಬಿಕರಿಗೆ, ಸ್ನೇಹಿತರಿಗೆ, ಮಂಗಳೂರು ಕ್ಷೇತ್ರದ ಜನತೆಗೆ ದುಃಖ ಸಹಿಸುವ ಶಕ್ತಿಯನ್ನು ದೇವರು ನೀಡಲೆಂದು ಯು.ಟಿ.ಖಾದರ್ ಸಂತಾಪ ಸೂಚಕದಲ್ಲಿ ತಿಳಿಸಿದ್ದಾರೆ.
ಸಚಿವರು ಬೆಂಗಳೂರಿನಲ್ಲಿ ವಿಧಾನಸಭಾ ಅಧಿವೇಶನದಲ್ಲಿರುವುದರಿಂದ ಅಪಘಾತದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ತುರ್ತು ಅಗತ್ಯತೆಯ ಬಗ್ಗೆ ಸಂಬಂಧಿಸಿದ ವೈದ್ಯಾಧಿಕಾರಿ, ಆಸ್ಪತ್ರೆ ಹಾಗೂ ಪೊಲೀಸ್ ಇಲಾಖೆ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಇದಕ್ಕಾಗಿ ಸಚಿವರ ಸೂಚನೆಯ ಮೇರೆಗೆ ಸ್ಥಳೀಯ ಜನಪ್ರತಿನಿಧಿಗಳು ಸೂಕ್ತ ವ್ಯವಸ್ಥೆಯಲ್ಲಿ ತೊಡಗಿದ್ದಾರೆಂದು ಅವರು ಮಾಹಿತಿ ನೀಡಿದರು.
Next Story





