99 ವರ್ಷದ ವೃದ್ಧನಿಂದ 10 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ: ಆರೋಪ

ಚೆನ್ನೈ, ಜು. 9: ಹತ್ತು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ 99 ವರ್ಷದ ಏಳು ಮಕ್ಕಳ ತಂದೆಯನ್ನು ಚೆನ್ನೈಯಿಂದ ಬಂಧಿಸಲಾಗಿದ.
ಆರೋಪಿಯನ್ನು ಸರಕಾರಿ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಕೆ. ಪರಶುರಾಮನ್ ಎಂದು ಗುರುತಿಸಲಾಗಿದೆ. ಪರಶುರಾಮನ್ ತನ್ನ ಮನೆಯ ಸಮೀಪ 5 ಬಾಡಿಗೆ ಮನೆಗಳನ್ನು ಕಟ್ಟಿಸಿದ್ದಾನೆ. ಇಲ್ಲಿನ ಒಂದು ಬಾಡಿಗೆ ಮನೆಯಲ್ಲಿ ಬಾಲಕಿ ತನ್ನ ಹೆತ್ತವರೊಂದಿಗೆ ಜೀವಿಸುತ್ತಿದ್ದಳು. ಹೊಟ್ಟೆ ನೋವು ಎಂದು ಹೇಳಿದ ಬಳಿಕ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಪೋಷಕರಿಗೆ ಗೊತ್ತಾಗಿದೆ. ಪರಶುರಾಮ್ ಅವರನ್ನು ಅವರ ಮನೆಯಿಂದ ಬಂಧಿಸಲಾಗಿದೆ ವಿಚಾರಣೆ ವೇಳೆ ಪರಶುರಾಮ್ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





