ಹೊಸನಗರ: ಬಸ್ ಢಿಕ್ಕಿ; ಬೈಕ್ ಸವಾರ ಮೃತ್ಯು, ಯುವತಿಗೆ ಗಾಯ

ಕುಂದಾಪುರ, ಜು. 9 : ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾಸ್ತಿಕಟ್ಟೆ ಬಳಿ ಬಸ್ -ಬೈಕ್ ಢಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಿಂಬದಿ ಸವಾರೆ ಗಂಭೀರ ಗಾಯಗೊಂಡ ಘಟನೆ ಸೋಮವಾರ ಸಂಜೆ 6:30ರ ಸುಮಾರಿಗೆ ಸಂಭವಿಸಿದೆ.
ಕೊಲ್ಲೂರು ಸಮೀಪದ ಇಡೂರು -ಕುಂಞಡಿ ನಿವಾಸಿ ಪ್ರಸನ್ನ ಶೆಟ್ಟಿ (26) ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಂಭೀರ ಗಾಯಗೊಂಡ ಅರ್ಪಿತಾ ಶೆಟ್ಟಿ (23) ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಸ್ ಮಾಸ್ತಿಕಟ್ಟೆಯಿಂದ ತೀರ್ಥಹಳ್ಳಿ ಮಾರ್ಗವಾಗಿ ತಿರುಪತಿ ಕಡೆಗೆ ಸಂಚರಿಸುತ್ತಿದ್ದು, ಇವರಿಬ್ಬರು ಬೈಕ್ ನಲ್ಲಿ ಉಡುಪಿ ಕಡೆಗೆ ಹೋಗುತ್ತಿದ್ದರು ಎನ್ನಲಾಗಿದೆ.
ಅರ್ಪಿತಾ ಸಿದ್ದಾಪುರ ಆಜ್ರಿ ಮೂಲದವರಾಗಿದ್ದು, ಈ ವರ್ಷ ವಷ್ಟೇ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಪದವಿ ಮುಗಿಸಿದ್ದರು. ಪ್ರಸನ್ನ ಅವರ ಮೃತದೇಹವನ್ನು ಹೊಸನಗರದ ತಾಲೂಕು ಆಸ್ಪತ್ರೆಯ ಶವಗಾರದಲ್ಲಿ ಇಡಲಾಗಿದೆ. ಹೊಸನಗರ ತಾಲೂಕಿನ ನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Next Story





