ಬಿ.ಎ.ಮೊಹಿದಿನ್ ನಿಧನಕ್ಕೆ ರಮಾನಾಥ ರೈ ಸಂತಾಪ

ಮಂಗಳೂರು, ಜು.10: ಮಾಜಿ ಸಚಿವರಾಗಿದ್ದ ಬಿ.ಎ.ಮೊಹಿದಿನ್ ವಿಶಾಲ ಮನೋಭಾವದ ಸದ್ಗುಣ ವ್ಯಕ್ತಿತ್ವ ಹೊಂದಿರುವ, ಎಲ್ಲ ಜಾತಿ ಜನಾಂಗದ ವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ವೈಯಕ್ತಿಕವಾಗಿ ತನ್ನ ಜೊತೆ ಆತ್ಮೀಯವಾಗಿದ್ದ ಅವರ ಅಗಲಿಕೆ ದುಃಖ ತಂದಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಸಂತಾಪ ಸೂಚಿಸಿದ್ದಾರೆ.
ಸಾಮಾಜಿಕ ಸಾಮರಸ್ಯದ ವಿಚಾರದಲ್ಲಿ ರಾಜಿ ಮಾಡಿಕೊಳ್ಳದ ಬಿ.ಎ. ಮೊಹಿದಿನ್ ಸರ್ವರನ್ನು ಆದರದಿಂದ ನೋಡಿಕೊಳ್ಳುತ್ತಿದ್ದರು. ರಾಜ್ಯ ಸರಕಾರ ಮೊಹಿದಿನ್ ಅವರಿಗೆ ಅವರ ಸಮಾಜ ಸೇವೆಯನ್ನು ಪರಿಗಣಿಸಿ ದೇವರಾಜು ಅರಸು ಪ್ರಶಸ್ತಿಯನ್ನು ನೀಡಿ ಗೌರವಿಸಿರುವುದು ಅವರ ಸೇವೆಗೆ ಸಾಕ್ಷಿಯಾಗಿದೆ ಎಂದರು. ಅವರ ಕುಟುಂಬಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಮಾಜಿ ಸಚಿವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
Next Story





