ಜು.27ರಿಂದ ರಾಜ್ಯಮಟ್ಟದ ಕನ್ನಡ ಕಾವ್ಯ ಕಮ್ಮಟ
ಬೆಂಗಳೂರು, ಜು.10: ಜು.27 ರಿಂದ 29 ರವರೆಗೆ ನಗರದ ಆನಂದರಾವ್ ವೃತ್ತದ ಬಳಿಯ ಎಸ್.ಜೆ.ಆರ್.ಸಿ. ಕಾಲೇಜಿನಲ್ಲಿ ರಾಜ್ಯಮಟ್ಟದ ‘ಕನ್ನಡ ಕಾವ್ಯ-ಸಂಸ್ಕೃತಿ ಕಮ್ಮಟ’ ಆಯೋಜಿಸಲಾಗಿದೆ.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ.ಮನು ಬಳಿಗಾರ್, ಪ್ರೊ.ಅರವಿಂದ ಮಾಲಗತ್ತಿ, ಡಾ.ಸಿದ್ಧಲಿಂಗಯ್ಯ, ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಮುಂತಾದವರು ಕಮ್ಮಟದಲ್ಲಿ ಭಾಗವಹಿಸಿ ಕನ್ನಡ ಕಾವ್ಯ, ಸಂಸ್ಕೃತಿಯ ವಿವಿಧ ವಿಚಾರಗಳನ್ನು ಉಪನ್ಯಾಸ-ಸಂವಾದಗಳ ಮೂಲಕ ತಿಳಿಸಿಕೊಡುತ್ತಾರೆ.
ಭಾಗವಹಿಸಲಿಚ್ಛಿಸುವ 35 ವರ್ಷದೊಳಗಿನ ಆಸಕ್ತರು ಜು.15ರೊಳಗೆ ಕಾರ್ಯಕ್ರಮ ಆಯೋಜಕರಾದ ಸಿಸಿರಾ-9448880985 ಹಾಗೂ ಡಾ.ಶೀಲವಂತ ಸಂಜೀವ ಕುಮಾರ್-9663222298ಗೆ ಸಂಪರ್ಕಿಸಿ ನೋಂದಾಯಿಸಿಕೊಳ್ಳಬೇಕು ಎಂದು ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
Next Story





