ಬೈಕ್ ಕಳವು ಪ್ರಕರಣ: ಮೂವರ ಬಂಧನ

ಬೆಂಗಳೂರು, ಜು.10: ಬೈಕ್ ಕಳವು ಮಾಡುತ್ತಿದ್ದ ಆರೋಪದ ಪ್ರಕರಣ ಸಂಬಂಧ ಮೂವರನ್ನು ಜೆಜೆ ನಗರ ಪೊಲೀಸರು ಬಂಧಿಸಿ 4 ಲಕ್ಷ ರೂ. ಮೌಲ್ಯದ 7 ವಿವಿಧ ಕಂಪೆನಿಯ ಬೈಕ್‌ಗಳನ್ನು ಶಪಡಿಸಿಕೊಂಡಿದ್ದಾರೆ.
ನಗರದ ಮೂಡಲಪಾಳ್ಯದ ಶಿವರಾಜ(24), ನೀಲಸಂದ್ರದ ಸೈಯದ್(19) ಮತ್ತು ರಂಗನಾಥ್ ಕಾಲನಿಯ ಮುದಾಸಿರ್ ಖಾನ್(26) ಬಂಧಿತರು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಕಳವು ಮಾಡುತ್ತಿದ್ದ ಬೈಕ್‌ಗಳನ್ನು ಹಣಕ್ಕಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಇವರ ಚಲನವಲನ ಗಮನಿಸಿ ಗಸ್ತಿನಲ್ಲಿದ್ದ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ಬಂಧನದಿಂದ ಮಾಗಡಿ ರಸ್ತೆ, ವಿಜಯನಗರ, ಬಸವೇಶ್ವರ ನಗರ, ಕಮರ್ಷಿಯಲ್ ಸ್ಟ್ರೀಟ್ ಮತ್ತು ಹನುಮಂತನಗರ ಠಾಣೆಯಲ್ಲಿ ವರದಿಯಾಗಿದ್ದ ಬೈಕ್ ವಾಹನಗಳ ಕಳವು ಪ್ರಕರಣಗಳು ಪತ್ತೆಯಾಗಿವೆ.
Next Story





