ಸುರತ್ಕಲ್: ನಿರ್ಮಿತಿ ಕೇಂದ್ರದಿಂದ ತರಬೇತಿ

ಮಂಗಳೂರು, ಜು.10: ದ.ಕ. ನಿರ್ಮಿತಿ ಕೇಂದ್ರ ಸುರತ್ಕಲ್ ಆವರಣದಲ್ಲಿ ಜಿಲ್ಲೆಯ 4 ಇಂಜಿನಿಯರಿಂಗ್ ಕಾಲೇಜುಗಳ ಆಯ್ದ ಸುಮಾರು 35 ವಿದ್ಯಾರ್ಥಿ ಗಳಿಗೆ 1 ತಿಂಗಳ ಅವಧಿಯ ಇಂಟರ್ನ್‌ಶಿಪ್ ತರಬೇತಿ ನೀಡುವ ಕಾರ್ಯಕ್ರಮವನ್ನು ಸುರತ್ಕಲ್‌ನ ಎನ್‌ಐಟಿಕೆಯ ಡಾ.ಕೆ.ಎಸ್. ಬಾಬುನಾರಾಯಣ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಇತ್ತೀಚೆಗೆ ವಿದ್ಯೆಯೊಂದಿಗೆ ಪ್ರಾಕ್ಟಿಕಲ್ ಟ್ರೈನಿಂಗ್ ಕೂಡ ಆವಶ್ಯಕತೆ ಇದೆ ಎಂದು ಮನಗಂಡು ಎಲ್ಲ ಕೋರ್ಸ್‌ಗಳಲ್ಲಿ ಈ ತರಬೇತಿಯನ್ನು ಕಡ್ಡಾಯಗೊಳಿಸಿರುವುದು ಸ್ವಾಗತಾರ್ಹವಾಗಿದೆ. ಸಿವಿಲ್ ಇಂಜಿನಿಯರ್‌ಗಳು ಮುಖ್ಯವಾಗಿ ದೇಶದ ಅಭಿವೃದ್ಧಿಯಲ್ಲಿ ಅತ್ಯುನ್ನತ ಪಾತ್ರ ವಹಿಸುತ್ತಾರೆ. ಸಿವಿಲ್ ಇಂಜಿನಿಯರ್ ಆಗಲು ಪ್ರತಿ ವಿದ್ಯಾರ್ಥಿಯು ಹೆಮ್ಮೆ ಪಡಬೇಕೆಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
ಪ್ರೊ. ಸುಭಾಷ್ ಯರ್‌ಗಲ್ ಮತ್ತು ಪ್ರೊ.ಸುನೀಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ತರಬೇತಿಯ ಮಹತ್ವ ಮತ್ತು ವಿದ್ಯಾರ್ಜನೆಯಲ್ಲಿ ಶಿಕ್ಷಕ ಮತ್ತು ವಿದ್ಯಾರ್ಥಿಗಳ ಪಾತ್ರಗಳ ಬಗ್ಗೆ ವಿವರಿಸಿದರು.
ಸುಳ್ಯ ಕೆವಿಜಿ ಕಾಲೇಜ್ ಆಫ್ ಇಂಜಿನಿಯರಿಂಗ್, ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಮ್ಯಾನೇಜ್‌ಮೆಂಟ್, ಶ್ರೀನಿವಾಸ್ ಸ್ಕೂಲ್ ಆಫ್ ಇಂಜಿನಿಯಂಗ್, ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ ಆಂಡ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಇಂಟರ್ನ್‌ಶಿಪ್ ತರಬೇತಿಯನ್ನು ಪಡೆಯಲಿದ್ದಾರೆ. ಇಂಟರ್ನ್‌ಶಿಪ್ ತರಬೇತಿಯು ಜು.9ರಿಂದ ಆ.8ರವರೆಗೆ ನಡೆಯಲಿದೆ ಎಂದು ದ.ಕ. ನಿರ್ಮಿತಿ ಕೇಂದ್ರಯೋಜನಾ ನಿರ್ದೇಶಕರು ತಿಳಿಸಿದರು. ದ.ಕ. ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ರಾಜೇಂದ್ರ ಕಲ್ಬಾವಿ ಅತಿಥಿಗಳನ್ನು ಸ್ವಾಗತಿಸಿ, ವಂದಿಸಿದರು.







