ಬೆಳಗಾವಿ ಜೈಲು ಸೇರಿದ ಭೂಗತ ಪಾತಕಿ ಬನ್ನಂಜೆ ರಾಜ

ಉಡುಪಿ, ಜು.10: ತನ್ನ ತಾಯಿಯ ಆರೋಗ್ಯ ವಿಚಾರಿಸಲು ಕಲ್ಮಾಡಿಯ ಸಸಿತೋಟ ಮನೆಗೆ ಬಂದಿದ್ದ ಭೂಗತ ಪಾತಕಿ ಬನ್ನಂಜೆ ರಾಜನನ್ನು ಉಡುಪಿ ಪೊಲೀಸರು ಇಂದು ಬಿಗಿ ಭದ್ರತೆಯಲ್ಲಿ ಬೆಳಗಾವಿಯ ಹಿಂಡಲಗಾ ಜೈಲಿಗೆ ಕರೆದೊಯ್ದಿದ್ದಾರೆ.
ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಅನುಮತಿಯಂತೆ ಪೊಲೀಸ್ ಸರ್ಪಗಾವಲಿನಲ್ಲಿ ಜು.9ರಂದು ಬೆಳಗ್ಗೆಯಿಂದ ಸಂಜೆಯವರೆಗೆ ಕಲ್ಮಾಡಿಯ ಮನೆಯಲ್ಲಿ ಅನಾರೋಗ್ಯ ಪೀಡಿತ ತಾಯಿ ಜೊತೆ ಇದ್ದ ಬನ್ನಂಜೆ ರಾಜನನ್ನು ಸಂಜೆ ಭದ್ರತೆಯಲ್ಲಿ ಉಡುಪಿ ನಗರ ಠಾಣೆಗೆ ಕರೆದುಕೊಂಡು ಬಂದು ಲಾಕಪ್ ನಲ್ಲಿ ಇರಿಸಲಾಗಿತ್ತು. ಭದ್ರತೆಯ ಕಾರಣದಿಂದ ರಾತ್ರಿ ಠಾಣೆಗೆ ಆಗಮಿಸಿದ ಜಿಲ್ಲಾಸ್ಪತ್ರೆಯ ವೈದ್ಯರು ಆತನನ್ನು ಲಾಕಪ್‌ನಲ್ಲೇ ವೈದ್ಯಕೀಯ ಪರೀಕ್ಷೆಗೆ ಒಳ ಪಡಿಸಿದರು.
ಇಂದು ಬೆಳಗ್ಗೆ 8ಗಂಟೆಯ ಸುಮಾರಿಗೆ ಆತನನ್ನು ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಬಿಗಿ ಭದ್ರತೆಯಲ್ಲಿ ಮಾರ್ಗದ ಮೂಲಕ ಬೆಳಗಾವಿ ಜೈಲಿಗೆ ಕರೆದೊಯ್ದಿದ್ದು ಸಂಜೆ 4 ಗಂಟೆ ಸುಮಾರಿಗೆ ಬೆಳಗಾವಿ ತಲುಪಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ.
Next Story





