ಟ್ರೈನ್ ಸ್ಕೂಲ್..!
ಮೈಸೂರಿನ ನಂಜನಗೂಡು ಜಿಲ್ಲೆ ಹಾರೋಪುರದಲ್ಲಿರುವ ರೈಲಿನ ಮಾದರಿಯ ಶಾಲೆಯೊಂದು ಇದೀಗ ಎಲ್ಲರ ಗಮನವನ್ನು ತನ್ನತ್ತ ಸೆಳೆಯುತ್ತಿದೆ. ಸರಕಾರಿ ಶಾಲೆಗಳತ್ತ ಮಕ್ಕಳನ್ನು ಸೆಳೆಯಲು ಶಿಕ್ಷಕರು ಈ ತಂತ್ರ ಮಾಡಿದ್ದಾರೆ. ಶಾಲೆಯ ಮೂರು ಕೊಠಡಿಯ ಕಟ್ಟಡಕ್ಕೆ ಇಂಜಿನ್, ಎರಡು ಬೋಗಿಗಳ ರೈಲಿನ ಮಾದರಿ ಪೈಂಟ್ ಮಾಡಲಾಗಿದೆ. ಹಳ್ಳಿಗಾಡಿನಲ್ಲಿರುವ ಈ ಶಾಲೆ ಇದೀಗ ಎಲ್ಲೆಡೆ ಪ್ರಸಿದ್ಧಿಯಾಗಿದೆ. ಇದು ಶಾಲಾ ಶಿಕ್ಷಕರ ಶ್ರಮವಾಗಿದ್ದು, ಪೈಂಟಿಂಗ್‌ಗೆ ತಗುಲಿದ ವೆಚ್ಚವನ್ನೂ ಶಿಕ್ಷಕರೇ ಭರಸಿದ್ದಾರೆ ಎನ್ನಲಾಗಿದೆ. ಈ ಶಾಲೆಯಲ್ಲಿ 1ರಿಂದ 7ನೇ ತರಗತಿ ವರೆಗೆ ಒಟ್ಟು 55 ಮಕ್ಕಳು ಕಲಿಯುತ್ತಿದ್ದಾರೆ.
Next Story





