ಹಿರಿಯ ಸಾಹಿತಿ ಮುಹಮ್ಮದ್ ಬಡ್ಡೂರ್ ತಂದೆ ನಿಧನ

ಮಂಗಳೂರು, ಜು. 11: ಹಿರಿಯ ಸಾಹಿತಿ ಮುಹಮ್ಮದ್ ಬಡ್ಡೂರ್ ಅವರ ತಂದೆ ಉಸ್ತಾದ್ ಬಿ. ಇಬ್ರಾಹೀಮ್ ಹಾಜಿ (97) ಬುಧವಾರ ಬೆಳಗ್ಗೆ ನಿಧನರಾದರು.
ಇಬ್ರಾಹಿಮ್ ಹಾಜಿ ಓರ್ವ ಪ್ರಖ್ಯಾತ ತಾಲಿಂ ಮಾಸ್ಟರ್ ಆಗಿದ್ದರು. ಕರ್ನಾಟಕ, ಕೇರಳ ಹಾಗೂ ದುಬೈಯಲ್ಲಿ ಗರಡಿ ನಡೆಸಿದ್ದರು. ಸುಮಾರು 6000 ಶಿಷ್ಯರನ್ನು ತರಬೇತುಗೊಳಿಸಿರುತ್ತಾರೆ. ಉತ್ತಮ ಸಮಾಜ ಸೇವಕರೂ ಆಗಿದ್ದು, ಊರ ಪರಊರ ಹಲವು ಸಮಸ್ಯೆಗಳನ್ನು ರಾಜಿ ಪಂಚಾಯತಿ ಮೂಲಕ ಮುಗಿಸಿ ಜನಪ್ರಿಯರಾಗಿದ್ದರು. ಧಾರ್ಮಿಕ ವಿಚಾರದಲ್ಲೂ ಕಾಳಜಿ ಹೊಂದಿದ್ದ ಅವರು 1950ರಲ್ಲಿ ಬಡ್ಡೂರಿನಲ್ಲಿ ಮದ್ರಸ ನಿರ್ಮಿಸಿ ಇಂದಿನವರೆಗೂ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
ಮೃತರು ನಾಲ್ಕು ಮಂದಿ ಪುತ್ರರು, ನಾಲ್ಕು ಮಂದಿ ಪುತ್ರಿಯರು ಹಾಗು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
Next Story